ಬಿಜೆಪಿ ಗರ್ಭಗುಡಿಯಲ್ಲಿ ರಮೇಶ್​ ಜಾರಕಿಹೊಳಿ ಇರೋದು ಕಷ್ಟ; ಕಾಂಗ್ರೆಸ್​ನಲ್ಲಿ 8-10 ಜನರಿಗೆ ಮುಖ್ಯಮಂತ್ರಿ ಆಗೋ ಯೋಗ್ಯತೆ ಇದೆ: ಕೈ ಶಾಸಕ

ರಮೇಶ್ ಜಾರಕಿಹೊಳಿ ಮುಂದಿನ‌ ದಿನದಲ್ಲಿ ಕಾಂಗ್ರೆಸ್, ಜೆಡಿಎಸ್ ಸೇರಿದರೆ ಆಶ್ಚರ್ಯಪಡಬೇಕಿಲ್ಲ. ಮೇಲಾಗಿ, ಅವರು ಮೊದಲಿನಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದವರು. ಅವರಿಗೆ ಬಿಜೆಪಿ ಪಕ್ಷದ ಗರ್ಭಗುಡಿ ಸಂಸ್ಕೃತಿ ಒಗ್ಗಲ್ಲ ಅಂತ ಅನ್ನಿಸಿದೆ: ಅಮರೇಗೌಡ

ಬಿಜೆಪಿ ಗರ್ಭಗುಡಿಯಲ್ಲಿ ರಮೇಶ್​ ಜಾರಕಿಹೊಳಿ ಇರೋದು ಕಷ್ಟ; ಕಾಂಗ್ರೆಸ್​ನಲ್ಲಿ 8-10 ಜನರಿಗೆ ಮುಖ್ಯಮಂತ್ರಿ ಆಗೋ ಯೋಗ್ಯತೆ ಇದೆ: ಕೈ ಶಾಸಕ
ರಮೇಶ್ ಜಾರಕಿಹೊಳಿ, ಅಮರೇಗೌಡ
Follow us
TV9 Web
| Updated By: Skanda

Updated on: Jun 26, 2021 | 8:16 AM

ಕೊಪ್ಪಳ: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಒಗ್ಗೋದಿಲ್ಲ ಅನ್ನಿಸುತ್ತೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್​ಗೆ ವಾಪಾಸ್ಸಾಗಬಹುದು. ಇಲ್ಲ ಜೆಡಿಎಸ್​ ಪಕ್ಷವನ್ನಾದರೂ ಸೇರಬಹುದು ಎಂದು ಕಾಂಗ್ರೆಸ್​ ಶಾಸಕ ಅಮರೇಗೌಡ ಕೊಪ್ಪಳದಲ್ಲಿ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಅವರ ಸ್ನೇಹಿತರು ಬಾಂಬೆಗೆ ಹೋಗಿದ್ದರು. ಅವರಿಗೆ ಬಿಜೆಪಿಯ ವಾತಾವರಣ ಹಿಡಿಸುತ್ತಿಲ್ಲ ಅನ್ನಿಸುತ್ತೆ. ಹೀಗಾಗಿ ಅವರು ಬೇರೆ ಪಕ್ಷಕ್ಕೆ ಹೋದರೂ ಅಚ್ಚರಿಯಿಲ್ಲ ಎಂದಿದ್ದಾರೆ.

ರಮೇಶ್ ಜಾರಕಿಹೊಳಿ ಮುಂದಿನ‌ ದಿನದಲ್ಲಿ ಕಾಂಗ್ರೆಸ್, ಜೆಡಿಎಸ್ ಸೇರಿದರೆ ಆಶ್ಚರ್ಯಪಡಬೇಕಿಲ್ಲ. ಮೇಲಾಗಿ, ಅವರು ಮೊದಲಿನಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದವರು. ಅವರಿಗೆ ಬಿಜೆಪಿ ಪಕ್ಷದ ಗರ್ಭಗುಡಿ ಸಂಸ್ಕೃತಿ ಒಗ್ಗಲ್ಲ ಅಂತ ಅನ್ನಿಸಿದೆ. ಒಂದುವೇಳೆ ಕಾಂಗ್ರೆಸ್​ಗೆ ಬರ್ತೀನಿ ಎಂದರೆ ಪರಿಶೀಲನೆ ಮಾಡಲಾಗುವುದು. ರಾಜಕಾರಣ ಅಂದರೆ ನಿಂತ ನೀರಲ್ಲ. ಸಮಯ ಬಂದ ಹಾಗೆ ಬದಲಾಗೋದು ಸಹಜ. ಇವತ್ತು ಯಾರು ಯಾವ ಪಕ್ಷದಲ್ಲಿ ಇರ್ತಾರೆ ಅನ್ನೋದು ಗಂಭೀರವಾದ ವಿಷಯ ಅಲ್ಲ. ಆದರೆ ಇದು ಇತ್ತೀಚಿನ ದಿನಗಳಲ್ಲಿ ಬೇಸರ ತರಿಸಿರುವುದು ನಿಜ ಎಂದು ಅಮರೇಗೌಡ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿಯವರೇ ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಮಾಡಿಸಿದ್ದು. ಹೀಗಾಗಿ ಅವರೇ ಯಡಿಯೂರಪ್ಪರನ್ನ ಮುಖ್ಯಮಂತ್ರಿ ಪಟ್ಟದಿಂದ ತೆಗೀತಾರೆ ಎಂದು ನನಗೆ ಅನ್ನಿಸೋದಿಲ್ಲ. ಒಂದು ವಿಚಾರವಂತೂ ಸ್ಪಷ್ಟ, ಬಿಜೆಪಿ‌ ಸರ್ಕಾರ ಕರ್ನಾಟಕದಲ್ಲಿ ಉಳಿಯಬೇಕಾದರೆ ಯಡಿಯೂರಪ್ಪ ಕಾರಣ. ಅದನ್ನು ನಾನು ಮತ್ತೆ ಮತ್ತೆ ಹೇಳುತ್ತೇನೆ. ನೋ ಯಡಿಯೂರಪ್ಪ ನೋ ಬಿಜೆಪಿ ಇನ್ ಕರ್ನಾಟಕ ಎಂದು ಹೇಳಿರುವ ಅಮರೇಗೌಡ ಯಡಿಯೂರಪ್ಪ ಇಲ್ಲದೇ ಬಿಜೆಪಿಗೆ ಕರ್ನಾಟಕದಲ್ಲಿ ಸ್ತಿತ್ವ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಜಟಾಪಟಿ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಜಗಳ ನಡೆದಿಲ್ಲ. ನಮ್ಮಲ್ಲಿ‌ 8 ರಿಂದ 10 ಜನರಿಗೆ ಮುಖ್ಯಮಂತ್ರಿ ಆಗೋ ಯೋಗ್ಯತೆ ಇದೆ. ಅವರವರ ಅಭಿಮಾನಿಗಳು ಅವರ ಹೆಸರು ಹೇಳಿದ್ದಾರೆ. ಅದೇನು ಅಪರಾಧ ಅಲ್ಲ ಎಂದಿದ್ದಾರೆ. ಅಲ್ಲದೇ, ನಾವು ಎಚ್ಚರಿಕೆಯಿಂದ ಇರಬೇಕು, ಈಗಲೇ ಬಿಜೆಪಿ ಅಹಾರ ಆಗೋದು ಬೇಡ ಎಂದೂ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Ramesh Jarkiholi: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಬಿಟ್ಟಿದ್ದೇನೆ; ಕಾಂಗ್ರೆಸ್​ಗೂ ವಾಪಸ್ಸಾಗಲ್ಲ: ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟನೆ

ನನಗಿಂತಲೂ 10 ಪಟ್ಟು ಪ್ರಬಲ ಹುಲಿಗಳು ನನ್ನ ಕುಟುಂಬದಲ್ಲಿದ್ದಾರೆ: ಶಾಸಕ ರಮೇಶ್ ಜಾರಕಿಹೊಳಿ ವ್ಯಾಖ್ಯಾನ