AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Gandhi: ಟೀ ಮಾರುವ ಮಹಿಳೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಪ್ರಿಯಾಂಕಾ ಗಾಂಧಿ

Priyanka Gandhi: ಟೀ ಮಾರುವ ಮಹಿಳೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಪ್ರಿಯಾಂಕಾ ಗಾಂಧಿ

ರಮೇಶ್ ಬಿ. ಜವಳಗೇರಾ
|

Updated on: Apr 30, 2023 | 5:27 PM

Share

ದೋಸೆ ಹಾಕಿ ಗಮನಸೆದಿದ್ದ ಪ್ರಿಯಾಂಕಾ ಗಾಂಧಿ, ಇಂದು ಬೆಳಗಾವಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಮಹಿಳೆಯ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಕುರ್ಚಿ ಮೇಲೆ ಕುಳಿತು, ನೀರು ಕುಡಿದು ಮಹಿಳೆಗೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಜಾರಿಗೊಳಿಸುವ ಯೋಜನೆಗಳನ್ನು ವಿವರಿಸಿದ್ರು.

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರು ನಾನಾ ರೀತಿಯಾಗಿ ಮತದಾರರನ್ನು ಮನವೊಲೈಸುತ್ತಿದ್ದಾರೆ. ಮೊನ್ನೇ ಅಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೈಸೂರು ನಗರದ 80 ವರ್ಷ ಹಳೆಯ ಮೈಲಾರಿ ದೋಸೆ ಹೋಟೆಲ್‌ಗೆ ಭೇಟಿ ನೀಡಿ ದೋಸೆ ಹಾಕಿ ಗಮನಸೆಳೆದಿದ್ದರು. ಇದೀಗ ಇಂದು ಬೆಳಗಾವಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಮಹಿಳೆಯ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಕುರ್ಚಿ ಮೇಲೆ ಕುಳಿತು, ನೀರು ಕುಡಿದು ಮಹಿಳೆಗೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಜಾರಿಗೊಳಿಸುವ ಯೋಜನೆಗಳನ್ನು ವಿವರಿಸಿದ್ರು.