ದೆಹಲಿಯ ಪ್ರಮುಖ ತರಕಾರಿ ಮಾರ್ಕೆಟ್ ಆಜಾದ್ ಮಂಡಿಗೆ ಭೇಟಿ ನೀಡಿ ವರ್ತಕರೊಂದಿಗೆ ಮಾತಾಡಿದ ರಾಹುಲ್ ಗಾಂಧಿ
ಮಂಗಳವಾರ ಭೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಪ್ರಮುಖ ತರಕಾರಿ ಮಾರುಕಟ್ಟೆಯಾಗಿರುವ ಆಜಾದ್ ಮಂಡಿಗೆ ಭೇಟಿ ನೀಡಿ ಅಲ್ಲಿನ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದರು.
ದೆಹಲಿ: ಟೊಮೆಟೊ ಮತ್ತು ಇತರ ತರಕಾರಿಗಳ ಬೆಲೆ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಜನರನ್ನು ಕಂಗಾಲಾಗಿಸಿದೆ. ಮಂಗಳವಾರ ಬೆಂಗಳೂರು ನಗರದ ಕೇಜಿ ಟೊಮೆಟೊ (tomato) ಬೆಲೆ ರೂ. 180-190 ಇತ್ತು. ರಾಷ್ಟ್ರದ ರಾಜಧಾನಿಯಲ್ಲಿ ರೂ. 200ಕ್ಕಿಂತ ಹೆಚ್ಚಿನ ಬೆಲೆಗೆ ಟೊಮೆಟೊ ಮಾರಾಟವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi ) ದೆಹಲಿಯ ಪ್ರಮುಖ ತರಕಾರಿ ಮಾರುಕಟ್ಟೆಯಾಗಿರುವ ಆಜಾದ್ ಮಂಡಿಗೆ (Delhi Azad Mandi) ಭೇಟಿ ನೀಡಿ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿದರು. ಮೊಬೈಲ್ ನಲ್ಲಿ ಸೆರೆಹಿಡಿದಿರುವ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಮಂಡಿಯಲ್ಲಿನ ವರ್ತಕರೊಂದಿಗೆ ಸಂವಾದ ನಡೆಸುತ್ತಿರುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ