Dharwad News: ಎತ್ತುಗಳು ಮಾಯ, ನೊಗಕ್ಕೆ ಹೆಗಲು ಕೊಟ್ಟ ರೈತ, ವಿಡಿಯೋ ನೋಡಿ
ಬಾಡಿಗೆ ಎತ್ತುಗಳು ಸಿಗದ ಹಿನ್ನಲೆಯಲ್ಲಿ ಸೋಯಾಬಿನ್ ಬೆಳೆ ನಡುವೆ ಬೆಳೆದ ಕಸ ತಗೆಯಲು ಸ್ವತಃ ರೈತನೇ ನೊಗಕ್ಕೆ ಹೆಗಲು ಕೊಟ್ಟಿದ್ದಾನೆ
ಹುಬ್ಬಳ್ಳಿ, (ಆಗಸ್ಟ್ 01): ಎತ್ತು ಹೋದ ಮೇಲೆ ಬೇಸಾಯ ಸಿಗದೇ ಬಿತ್ತನೆಗೂ ರೈತ ಪಡಿಪಾಟಲು ಪಡುವ ಸ್ಥಿತಿಯುಂಟಾಗಿದೆ. ಹೌದು….ಬಾಡಿಗೆ ಎತ್ತುಗಳು ಸಿಗದ ಹಿನ್ನಲೆಯಲ್ಲಿ ಸೋಯಾಬಿನ್ ಬೆಳೆ ನಡುವೆ ಬೆಳೆದ ಕಸ ತಗೆಯಲು ಸ್ವತಃ ರೈತನೇ ನೊಗಕ್ಕೆ ಹೆಗಲು ಕೊಟ್ಟಿದ್ದಾನೆ. ಸತತ ಮಳೆ ಸುರಿದ ಹಿನ್ನಲೆ ಬೆಳೆ ಮಧ್ಯೆ ವೀಪರಿತ ಕಸ ಬೆಳೆದಿದೆ. ಆದ್ರೆ, ಇದರಲ್ಲಿ ಟ್ರ್ಯಾಕ್ಟರ್ ನಡೆಯುವುದಿಲ್ಲ. ಎಡೆ ಹೊಡೆಯಲು ಎತ್ತುಗಳು ಬೇಕು. ಆದ್ರೆ, ಈಗಿನ ಕಾಲದಲ್ಲಿ ಎತ್ತುಗಳು ಮಾಯವಾಗಿದ್ದರಿಂದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ರೈತ ಸುರೇಶ್ ಗೌಡ, ನೊಗಕ್ಕೆ ಹೆಗಲು ಕೊಟ್ಟು ಎಡೆ ಹೊಡೆಯುತ್ತಿದ್ದಾರೆ. ಬಾಡಿಗೆ ಎತ್ತುಗಳು ಸಿಗದ ಹಿನ್ನಲೆ ತಾವೇ ನೊಗಕ್ಕೆ ಹೆಗಲು ಕೊಟ್ಟು ಸೋಯಾಬಿನ್,ಶೇಂಗಾ ಬೆಳೆಗಳ ಮಧ್ಯೆ ಬೆಳೆದ ಕಸ ತಗೆಯುತ್ತಿದ್ದಾರೆ. ದಿನಕ್ಕೆ ಒಂದು ಎಕರೆ ಎಡೆ ಹೊಡೆಯುವ ಮೂಲಕ ಕಸ ಕೀಳಬಹುದು ಎನ್ನುತ್ತಾರೆ ರೈತ ಸುರೇಶ್ .
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published on: Aug 01, 2023 11:38 AM
Latest Videos