ಈಡಿ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನದಲ್ಲಿ ಬ್ಯಾರಿಕೇಡ್ ಮೇಲಿಂದ ಜಾರಿ ಬಿದ್ದರು ಕಾಂಗ್ರೆಸ್ ನಾಯಕರು

Edited By:

Updated on: Jun 13, 2022 | 3:24 PM

ಪೋಲಿಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಹತ್ತಿ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಒಬ್ಬರ ನಂತರ ಒಬ್ಬರು ಪ್ಯಾಕ ಆಫ್ ಕಾರ್ಡ್ ಗಳ ಹಾಗೆ ಉರುಳಿ ಬಿದ್ದರು. ಬಿದ್ದವರಲ್ಲಿ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ನಲಪಾಡ್ ಮೊದಲಾದವರು ಸೇರಿದ್ದರು.

Bengaluru: ರಾಹುಲ್ ಗಾಂಧಿಗೆ (Rahul Gandhi) ಜಾರಿ ನಿರ್ದೇಶನಾಲಯ (Enforcement Directorate) ನೀಡಿರುವ ನೋಟಿಸ್ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತರು ಶಾಂತಿನಗರದಲ್ಲಿರುವ ಈಡಿ ಕಚೇರಿಯನ್ನು ಪೋಲಿಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಹತ್ತಿ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಒಬ್ಬರ ನಂತರ ಒಬ್ಬರು ಪ್ಯಾಕ ಆಫ್ ಕಾರ್ಡ್ ಗಳ ಹಾಗೆ ಉರುಳಿ ಬಿದ್ದರು. ಬಿದ್ದವರಲ್ಲಿ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ನಲಪಾಡ್ ಮೊದಲಾದವರು ಸೇರಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.