ಹುಬ್ಬಳ್ಳಿ ಕಿಮ್ಸ್ ಅವರಣದಲ್ಲಿ ಹಿಂದೂ ಕಾರ್ಯಕರ್ತನಿಂದ ಪೊಲೀಸ್ ಅಧಿಕಾರಿಗೆ ಧಮ್ಕಿ!

ಅವನ ಜೊತೆಯಿರುವ ಮತ್ತೊಬ್ಬ ವ್ಯಕ್ತಿ ಮಲ್ಲಿಕಾರ್ಜುನ ಅವರಿಗೆ ಕೈ ಜೋಡಿಸಿ ಬೇಜಾರು ಮಾಡ್ಕೋಬೇಡಿ ಅಂಥ ಹೇಳುತ್ತಿದ್ದರೂ ಕಾರ್ಯಕರ್ತ ಮಾತ್ರ ಕೂಗಾಡುವುದನ್ನು ಹೆಚ್ಚಿಸುತ್ತಾ ಹೋಗುತ್ತಾನೆ.

TV9kannada Web Team

| Edited By: Arun Belly

Jun 13, 2022 | 4:45 PM

Hubballi: ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ (Hindu activist) ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರನ್ನು ಬೈದಾಡಿದ ಪ್ರಸಂಗ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು. ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ (PSI Mallikarjun) ಅವರ ವಿರುದ್ಧ ಆವಾಜ್ ಹಾಕಿದ ಕಾರ್ಯಕರ್ತ. ಅವನ ಜೊತೆಯಿರುವ ಮತ್ತೊಬ್ಬ ವ್ಯಕ್ತಿ ಮಲ್ಲಿಕಾರ್ಜುನ ಅವರಿಗೆ ಕೈ ಜೋಡಿಸಿ ಬೇಜಾರು ಮಾಡ್ಕೋಬೇಡಿ ಅಂಥ ಹೇಳುತ್ತಿದ್ದರೂ ಕಾರ್ಯಕರ್ತ ಮಾತ್ರ ಕೂಗಾಡುವುದನ್ನು ಹೆಚ್ಚಿಸಿತ್ತಾ ಹೋಗುತ್ತಾನೆ. ಬೇರೆ ಪೊಲೀಸರು (police personnel) ಅಲ್ಲಿಗೆ ಬಂದು ಕಾರ್ಯಕರ್ತ ಮತ್ತು ಮಲ್ಲಿಕಾರ್ಜುನ ಅವರನ್ನು ಶಾಂತಗೊಳಿಸುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada