ನೆಲಮಂಗಲ: ಕಾದಾಡುತ್ತಿದ್ದ ಎರಡು ಹಾವುಗಳನ್ನು ಉರಗ ತಜ್ಞ ನಾಗೇಂದ್ರ ಹಿಡಿದು ಸುರಕ್ಷಿತವಾಗಿ ಅರಣ್ಯಪ್ರದೇಶದಲ್ಲಿ ಬಿಟ್ಟರು

ನೆಲಮಂಗಲ: ಕಾದಾಡುತ್ತಿದ್ದ ಎರಡು ಹಾವುಗಳನ್ನು ಉರಗ ತಜ್ಞ ನಾಗೇಂದ್ರ ಹಿಡಿದು ಸುರಕ್ಷಿತವಾಗಿ ಅರಣ್ಯಪ್ರದೇಶದಲ್ಲಿ ಬಿಟ್ಟರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 13, 2022 | 2:10 PM

ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಉರಗ ತಜ್ಞ ನಾಗೇಂದ್ರ ಅವರಿಗೆ ಫೋನ್ ಮಾಡಿ ಅಲ್ಲಿಗೆ ಕರೆಸಿದ್ದಾರೆ. ನಾಗೇಂದ್ರ ಎರಡೂ ಹಾವುಗಳನ್ನು ಹಿಡಿದು ಹೆಸರಘಟ್ಟ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

Nelamangala:  ಎರಡು ಸ್ವಜಾತಿ ಹಾವುಗಳ (snakes) ನಡುವಿನ ಪ್ರೇಮಸಲ್ಲಾಪ ಮತ್ತು ರತಿಕ್ರೀಡೆಯ ವಿಡಿಯೊಗಳನ್ನು ನಾವು ಈ ಹಿಂದೆ ತೋರಿಸಿದ್ದೇವೆ ಆದರೆ ಎರಡು ಭಿನ್ನ ಜಾತಿಯ ಹಾವುಗಳ ಮಧ್ಯೆ ನಡೆಯುವ ಕಾದಾಟ ತೋರಿಸಿಲ್ಲ. ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿಯಲ್ಲಿ (Madanayakanahalli) ನಾಗರಹಾವು ಮತ್ತು ಮಂಡಲ ಹಾವಿನ ನಡೆಯುತ್ತಿರುವ ಜಗಳ ನೀವಿಲ್ಲಿ ನೋಡಬಹುದು. ಸ್ಥಳೀಯರು ಅದನ್ನು ಗಮನಿಸಿದ ಬಳಿಕ ಒಬ್ಬ ಪೊಲೀಸ್ ಕಾನ್​ಸ್ಟೇಬಲ್​ ಅವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಉರಗ ತಜ್ಞ ನಾಗೇಂದ್ರ (snake expert Nagendra) ಅವರಿಗೆ ಫೋನ್ ಮಾಡಿ ಅಲ್ಲಿಗೆ ಕರೆಸಿದ್ದಾರೆ. ನಾಗೇಂದ್ರ ಎರಡೂ ಹಾವುಗಳನ್ನು ಹಿಡಿದು ಹೆಸರಘಟ್ಟ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.