ಬೆಂಗಳೂರಿನ ಹೋಟೆಲೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಮಗನ ಬಂಧನ

ಬೆಂಗಳೂರಿನ ಹೋಟೆಲೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಮಗನ ಬಂಧನ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 13, 2022 | 1:06 PM

ಸಿದ್ದಾರ್ಥ್ ಅವರು ನಗರದ ಹೋಟೇಲೊಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ ಆರೋಪದಲ್ಲಿ ಹಲಸೂರು ಠಾಣೆ ಪೋಲೀಸರಿಂದ ಬಂಧನಕ್ಕೊಳಗಾಗಿದ್ದು ಸದ್ಯ ಅವರ ವಶದಲ್ಲಿದ್ದಾರೆ.

Bengaluru: ಪ್ರಖ್ಯಾತ ನಟ ಬಾಲಿವುಡ್ ಶಕ್ತಿ ಕಪೂರ್ (Shakti Kapoor) ಅವರ ಮಗ ಮತ್ತು ಬಾಲಿವುಡ್ ನಲ್ಲಿ ಜನಪ್ರಿಯ ತಾರೆ ಅನಿಸಿಕೊಂಡಿರುವ ಶ್ರದ್ಧಾ ಕಪೂರ್ (Shraddha Kapoor) ಅವರ ಸಹೋದರ ಸಿದ್ಧಾರ್ಥ್ ಕಪೂರ್ (Siddharth Kapoor) ನಮ್ಮ ಬೆಂಗಳೂರಲ್ಲಿ ತೊಂದರೆಗೆ ಸಿಕ್ಕಿಕೊಂಡಿದ್ದಾರೆ. ವೃತ್ತಿಯಲ್ಲಿ ಡಿಜೆ ಆಗಿರುವ ಸಿದ್ದಾರ್ಥ್ ಅವರು ನಗರದ ಹೋಟೇಲೊಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ ಆರೋಪದಲ್ಲಿ ಹಲಸೂರು ಠಾಣೆ ಪೋಲೀಸರಿಂದ ಬಂಧನಕ್ಕೊಳಗಾಗಿದ್ದು ಸದ್ಯ ಅವರ ವಶದಲ್ಲಿದ್ದಾರೆ. ಅವರ ರಕ್ತ ನಮೂನೆ ಪರೀಕ್ಷೆ ನಡೆಸಿದಾಗ ಡ್ರಗ್ಸ್ ಸೇವಿಸಿದ್ದು ಖಚಿತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆ ಜಾರಿಯಲ್ಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.