ಸದನದಲ್ಲಿ ಖಾದರ್ ಬಿಜೆಪಿಯ ಒಬ್ಬರಲ್ಲ, ಇಬ್ಬರು ನಾಯಕರ ಗುಣಗಾನ ಮಾಡಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2022 | 7:48 PM

ಒಬ್ಬ ಕಾನೂನು ಸಚಿವರಾಗಿ ಮಾಧುಸ್ವಾಮಿ ಅವರಲ್ಲಿ ಅಪಾರ ಜ್ಞಾನವಿದೆ, ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರಲ್ಲಿರುವ ಬುದ್ಧಿಮತ್ತೆಗೆ ಎಲ್ಲರೂ ತಲೆದೂಗಲೇ ಬೇಕು ಎಂದು ಖಾದರ್ ಹೇಳುತ್ತಾರೆ.

ವಿಧಾನ ಸಭೆಯ ಕಲಾಪ ನಡೆದಾಗ ವಿರೋಧ ಪಕ್ಷದ ನಾಯಕರು (Leader of Opposition) ಆಡಳಿತ ಪಕ್ಷದ ನಾಯಕರನ್ನು ಇಲ್ಲವೇ ಸಚಿವರನ್ನು ಗುಣಗಾನ ಮಾಡುವ ಮೆಚ್ಚುಗೆಯ ಮಾತುಗಳನ್ನು ಹೇಳುವ ಸಂದರ್ಭಗಳು ಅಪರೂಪ ಮಾರಾಯ್ರೇ. ಆದರೆ ಬುಧವಾರದ ಕಲಾಪ ಅಂಥದೊಂದು ಘಟನೆಗೆ ಸಾಕ್ಷಿಯಾಯಿತು. ವಿರೋಧ ಪಕ್ಷದ ಪಕ್ಷದ ಉಪನಾಯಕರಾಗಿರುವ ಯುಟಿ ಖಾದರ್ (UT Khader) ಅವರು ಸದನದಲ್ಲಿ ಬುಧವಾರ ಒಬ್ಬರಲ್ಲ ಇಬ್ಬರು ಬಿಜೆಪಿ ನಾಯಕರನ್ನು ಶ್ಲಾಘಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಅವರನ್ನು ಮೊದಲು ಹೊಗಳುವ ಖಾದರ್ ಅವರು ಬಳಿಕ ಅವರ ವ್ಯಕ್ತಿತ್ವದಲ್ಲಿರುವ ಕೊರತೆಯ ಬಗ್ಗೆ ಮಾತಾಡಿ ಅದನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಂದ (BS Yediyurappa) ಕಲಿತು ಮೈಗೂಡಿಸಿಕೊಳ್ಳಬೇಕೆಂದು ಖಾದರ್ ಹೇಳುತ್ತಾರೆ.

ಒಬ್ಬ ಕಾನೂನು ಸಚಿವರಾಗಿ ಮಾಧುಸ್ವಾಮಿ ಅವರಲ್ಲಿ ಅಪಾರ ಜ್ಞಾನವಿದೆ, ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರಲ್ಲಿರುವ ಬುದ್ಧಿಮತ್ತೆಗೆ ಎಲ್ಲರೂ ತಲೆದೂಗಲೇ ಬೇಕು. ಅವರಿಂದ ನಾವು ಬಹಳಷ್ಟು ಕಲಿಯಬೇಕು ಅಂತ ಹೇಳುವ ಖಾದರ್, ಮಾಧುಸ್ವಾಮಿ ಅವರಲ್ಲಿ ಒಂದೆರಡು ಅಂಶಗಳ ಕೊರತೆಯಿದೆ, ಅದನ್ನು ಅವರು ಯಡಿಯೂರಪ್ಪನವರಿಂದ ಕಲಿಯಬೇಕು ಎನ್ನುತ್ತಾರೆ.

ಯಡಿಯೂರಪ್ಪನವರನ್ನು ವಿರೋಧ ಪಕ್ಷದ ಸದಸ್ಯರು ಸಹ ಇಷ್ಟಪಡುವುದಕ್ಕೆ ಕಾರಣವಿದೆ. ಅವರಲ್ಲಿರುವ ತಾಳ್ಮೆ ಮತ್ತು ಬದ್ಧತೆ ಅನುಕರಣೀಯವಾದದ್ದು. ಹಾಗಾಗೇ ಅವರು ಅನೇಕ ರಾಜಕಾರಣಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಅವರ ಅದೇ ಗುಣಗಳನ್ನು ಮಾಧುಸ್ವಾಮಿಯವರೂ ಅಳವಡಿಸಿಕೊಂಡರೆ ಅವರನ್ನು ಸಹ ಯುವ ರಾಜಕಾರಣಿಗಳು ಮಾದರಿಯಾಗಿಟ್ಟುಕೊಳ್ಳುತ್ತಾರೆ ಎಂದು ಖಾದರ್ ಹೇಳಿದರು.

ಇದನ್ನೂ ಓದಿ:  ಸಚಿವರು, ಶಾಸಕರಿಗೆ ‘ದಿ ಕಾಶ್ಮೀರ್​ ಫೈಲ್ಸ್​’ ವಿಶೇಷ ಶೋ; ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿದ ಸ್ಪೀಕರ್​ ಕಾಗೇರಿ