ವಾಜಪೇಯಿ ಕಾಲು ಹಿಡಿದು ಯತ್ನಾಳ್ ಸಚಿವರಾಗಿರಬೇಕು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್
ಬಿಜೆಪಿ ನಾಯಕರ ವಿರುದ್ಧ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ವಾಜಪೇಯಿ ಅವರ ಕಾಲು ಹಿಡಿದು ಯತ್ನಾಳ್ ಸಚಿವರಾಗಿರಬೇಕು ಎಂದು ಆರೋಪಿಸಿರುವ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿ.ಟಿ.ರವಿ ಆಹ್ವಾನ ಕೊಟ್ಟಿದ್ದಾರೆ. ಮೊದಲು ನನ್ನ ಜೊತೆ ನೀವು ಬಹಿರಂಗ ಚರ್ಚೆ ಗೆಲ್ಲಿ. ಆ ಮೇಲೆ ಖರ್ಗೆಯವರ ಬಳಿ ನಾನೇ ಕರೆದುಕೊಂಡು ಹೋಗ್ತೀನಿ ಎಂದು ಪ್ರದೀಪ್ ಸವಾಲು ಹಾಕಿದ್ದಾರೆ.
ಬೆಂಗಳೂರು, ಅಕ್ಟೋಬರ್ 14: ವಾಜಪೇಯಿ ಅವರ ಕಾಲು ಹಿಡಿದು ಯತ್ನಾಳ್ (Yatnal) ಸಚಿವರಾಗಿರಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ. ನಿಮ್ಮದು ಡ್ರಾಮಾ ಕಂಪನಿ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆಗೂ ಕೌಂಟರ್ ಕೊಟ್ಟಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿ.ಟಿ.ರವಿ ಆಹ್ವಾನ ಕೊಟ್ಟಿದ್ದಾರೆ. ಮೊದಲು ನನ್ನ ಜೊತೆ ನೀವು ಬಹಿರಂಗ ಚರ್ಚೆ ಗೆಲ್ಲಿ. ಆ ಮೇಲೆ ಖರ್ಗೆಯವರ ಬಳಿ ನಾನೇ ಕರೆದುಕೊಂಡು ಹೋಗ್ತೀನಿ ಎಂದು ಪ್ರದೀಪ್ ಸವಾಲು ಹಾಕಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 14, 2025 12:54 PM
Loading...
Unable to load recommendations.
Follow Us
