ಶಿವಸೇನಾ ಸೇರ್ಪಡೆ ಆಹ್ವಾನದ ಬಗ್ಗೆ ಬಸನಗೌಡ ಯತ್ನಾಳ್ ಮಹತ್ವದ ಘೋಷಣೆ
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೂ ಮತಗಳ ವಿಭಜನೆ ಆಗಬಾರದು ಎಂಬ ತಮ್ಮ ನಿಲುವನ್ನು ಅವರು ಪುನರುಚ್ಚರಿಸಿದರು. ಅಕ್ರಮ ಮಸೀದಿಗಳ ತೆರವು ಮತ್ತು ದೇವಾಲಯಗಳ ನಿಧಿಗಳ ದುರುಪಯೋಗದ ಬಗ್ಗೆ ಪ್ರಸ್ತಾಪಿಸಿ, ಕರ್ನಾಟಕದಲ್ಲಿ ಹಿಂದೂ ಸರ್ಕಾರ ರಚನೆಯಾಗುವ ಭವಿಷ್ಯ ನುಡಿದರು.
ಹಾಸನ, ಅಕ್ಟೋಬರ್ 14: ಶಿವಸೇನಾ ಶಿಂಧೆ ಬಣ ಸೇರ್ಪಡೆ ಆಫರ್ ಬಗ್ಗೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೂ ಮತಗಳು ವಿಭಜನೆಯಾಗಬಾರದು ಎಂಬುದು ತಮ್ಮ ಮುಖ್ಯ ಗುರಿಯಾಗಿದ್ದು, ಹಿಂದೂಗಳ ಮತ ವಿಭಜಿಸುವಂತಹ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Oct 14, 2025 12:30 PM

