ಬೆಂಗಳೂರಿನಲ್ಲಿ ಮುಂದುವರಿದ ರೋಡ್ ರೇಜ್: ಬುಲೆಟ್ ಬೈಕ್‌ನಲ್ಲಿ ಬಂದು ಅವಾಚ್ಯ ಶಬ್ಧಗಳಿಂದ ನಿಂದನೆ
ಬೆಂಗಳೂರು ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೆನ್ನೆ ರಾತ್ರಿ ಕುರುಬರಹಳ್ಳಿ ಮುಖ್ಯರಸ್ತೆಯಲ್ಲಿ ಬುಲೆಟ್ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಶರತ್ ಎನ್ನುವವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಇದೀಗ ಈ ಘಟನೆ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು, ಸಂಚಾರಿ ಸುರಕ್ಷತೆ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಬೆಂಗಳೂರು, ಅ.14: ಬೆಂಗಳೂರು ನಗರದಲ್ಲಿ ರೋಡ್ ರೇಜ್ (Bengaluru road rage) ಪ್ರಕರಣಗಳು ಹೆಚ್ಚಾಗುತ್ತಿವೆ. ಕುರುಬರಹಳ್ಳಿ ಮುಖ್ಯ ರಸ್ತೆಯಲ್ಲಿ ನಿನ್ನೆ ರಾತ್ರಿ (ಅ.13) ಬುಲೆಟ್ ಬೈಕ್‌ನಲ್ಲಿ ಬಂದ ವ್ಯಕ್ತಿ ಶರತ್ ಎನ್ನುವವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬುಲೆಟ್ ಬೈಕ್‌ನಲ್ಲಿ ಬಂದ ವ್ಯಕ್ತಿ, ಶರತ್ ಎನ್ನುವವರ ಬೈಕ್ಗೆ ಅಡ್ಡಗಟ್ಟಿ ಆವಾಜ್ ಹಾಕಿದ್ದಾನೆ. ಇದನ್ನು ಪ್ರಶ್ನಿಸಿದಕ್ಕೆ ಶರತ್‌ಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಶರತ್ ಅವರ ಹೆಲ್ಮೇಟ್ನಲ್ಲಿದ್ದ ಕ್ಯಾಮೆರಾದಲ್ಲಿ ಈ ಎಲ್ಲ ಘಟನೆಗಳು ರೆಕಾರ್ಡ್ ಆಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಇಂತಹ ಘಟನೆಗಳು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಸಾರ್ವಜನಿಕರ ಮೇಲೆ ಇಂತಹ ದಬ್ಬಾಳಿಗಳು ನಡೆಯದಂತೆ ಪೊಲೀಸರು ನೋಡಿಕೊಳ್ಳಬೇಕು. ಸಂಚಾರಿ ಸುರಕ್ಷತೆಗಳನ್ನು ಬಗ್ಗೆ ನಗರದ ಪೊಲೀಸರು ಗಮನ ನೀಡಬೇಕು. ಹಾಗೂ ಈ ವ್ಯಕ್ತಿಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

