ನಿಮ್ಮಲ್ಲಿ ನರ್ಸ್‌ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ: ಕಾಂಗ್ರೆಸ್​ ಶಾಸಕನ ಮಾತು ವೈರಲ್

Edited By:

Updated on: Oct 22, 2023 | 2:02 PM

ಅಥಣಿ ತಾಲೂಕಿನ ಪಿ.ಕೆ‌.ನಾಗನೂರು ಗ್ರಾಮದಲ್ಲಿ ನಡೆದ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆದಿದ್ದು, ಈ ತುಂಬಿದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ನರ್ಸ್‌ಗಳ ಸೌಂದರ್ಯದ ಬಗ್ಗೆ ಮಾತನಾಡಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಳಗಾವಿ, (ಅಕ್ಟೋಬರ್ 22): ಜಿಲ್ಲೆ ಅಥಣಿ ತಾಲೂಕಿನ ಪಿ.ಕೆ‌.ನಾಗನೂರು ಗ್ರಾಮದಲ್ಲಿ ನಡೆದ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಕಾಂಗ್ರೆಸ್ ಶಾಸಕ ರಾಜು ಕಾಗೆ ಭಾಷಣ ವೈರಲ್ ಆಗಿದೆ. ವೇದಿಕೆಯಲ್ಲಿದ್ದ ಶಾಸಕ ಲಕ್ಷ್ಮಣ್ ಸವದಿ ಉದ್ದೇಶಿಸಿ ಮಾತನಾಡಿದ ರಾಜು ಕಾಗೆ, ನರ್ಸ್​ಗಳ ಬ್ಯುಟಿ ಬಗ್ಗೆ ಮಾತನನಾಡಿದ್ದಾರೆ. ಒಂದ್ ವಿಷಯ ಲಕ್ಷ್ಮಣ್ ನಿನಗೂ ನಾನು ಹೇಳಿಲ್ಲ. ಲೀವರ್ ಟ್ರಾನ್ಸಫರಂಟ್ ಆದಾಗ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದೆ. ವೈದ್ಯರು ದಿನವೂ ಬಂದು ಹೇಗಿದ್ದೀರಿ ಅಂತಾ ಕೇಳೋರು. ‘ಆಗ ಆಸ್ಪತ್ರೆಯಲ್ಲಿ ಇದ್ದ ಡಾಕ್ಟರ್‌ಗೆ ನಾನು ಹೇಳಿದ್ದೆ, ನನ್ನ ಆರೋಗ್ಯಕ್ಕೆ ಏನು ಆಗಿಲ್ಲರಿ, ನನ್ನ ಆಪರೇಷನ್ ಸಕ್ಸಸ್ ಮಾಡೀರಿ, ಎಲ್ಲಾ ಆಗೈತಿ, ಆದ್ರೆ ನಿಮ್ಮಲ್ಲಿ ನರ್ಸ್‌ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ. ಅವರು ನನಗೆ ಅಜ್ಜ ಅನ್ನುತ್ತಿದ್ದಾರೆ ಅದು ನನಗೆ ಮಾನಸಿಕ ಆಗಿದೆ ಎಂದಿದ್ದೆ ಎಂದು ಹಾಸ್ಯ ಚಟಾಕೆ ಹಾರಿಸಿದರು. ಇದೀಗ ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Loading...
Unable to load recommendations.
Follow Us
TV9 Web

TV9 Kannada

Read More