ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ಡಿಕೆ ಸುರೇಶ್​ರನ್ನು ಪೋಲೀಸರು ನೂಕಾಡಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 14, 2022 | 1:20 PM

ಪಕ್ಷದ ಸಂಸದ ಡಿಕೆ ಸುರೇಶ್ ಅವರನ್ನು ಪೊಲೀಸರು ತಳ್ಳಾಡುತ್ತಿರುವ ದೃಶ್ಯ ಕೂಡ ಕಾಣುತ್ತಿದೆ. ದಿನೇಶ್ ಗುಂಡೂರಾವ್ ‘ನಮ್ಮೊಂದಿಗೆ ಬಹಳ ಅನ್ಯಾಯವಾಗುತ್ತಿದೆ, ಮೋದಿ ಸರ್ಕಾರ ಮುರ್ದಾಬಾದ್,’ ಎನ್ನುತ್ತಿದ್ದಾರೆ.

New Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮಂಗಳವಾರದಂದು ಸತತ ಎರಡನೇ ದಿನ ಈಡಿ ವಿಚಾರಣೆಗೆ ಕರೆದಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ನವದೆಹಲಿಯಲ್ಲಿ ಇಂದು ಕೂಡ ಪ್ರತಿಭಟನೆ ಮುಂದುವರಿಸಿದರು. ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆ ಸಿಬ್ಬಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯುತ್ತಿರುವುದನ್ನು ಇಲ್ಲಿ ನೋಡಬಹುದು. ಪಕ್ಷದ ಸಂಸದ ಡಿಕೆ ಸುರೇಶ್ ಅವರನ್ನು ಪೊಲೀಸರು ತಳ್ಳಾಡುತ್ತಿರುವ ದೃಶ್ಯ ಕೂಡ ಕಾಣುತ್ತಿದೆ. ದಿನೇಶ್ ಗುಂಡೂರಾವ್ ‘ನಮ್ಮೊಂದಿಗೆ ಬಹಳ ಅನ್ಯಾಯವಾಗುತ್ತಿದೆ, ಮೋದಿ ಸರ್ಕಾರ ಮುರ್ದಾಬಾದ್,’ ಎನ್ನುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.