ಮಿಮ್ಸ್​ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆ, ಬೆಳೆದ ಮಗಳನ್ನು ಕೈಯಲ್ಲಿ ಹೊತ್ತು ತಿರುಗಾಡಿದ ತಂದೆ

ಮಿಮ್ಸ್​ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆ, ಬೆಳೆದ ಮಗಳನ್ನು ಕೈಯಲ್ಲಿ ಹೊತ್ತು ತಿರುಗಾಡಿದ ತಂದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 14, 2022 | 12:20 PM

ರೋಗಿಯನ್ನು ಕರೆದೊಯ್ಯಲು ಒಂದು ವ್ಹೀಲ್ ಚೇರ್ ಕೊಡದ ಕಾರಣ ತಂದೆ ಬೆಳೆದ ಮಗಳನ್ನು ಕೈಯಲ್ಲಿ ಹೊತ್ತುಕೊಂಡು ಓಡಾಡುತ್ತಿದ್ದಾರೆ. ಡಾ ಸುಧಾಕರ್ ಸರ್ ಕೊಂಚ ಗಮನಿಸುತ್ತೀರಾ? ಅಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಉಪಕರಣ ಸರಿಯಿಲ್ಲವಂತೆ. ಒಮ್ಮೆ ಭೇಟಿ ನೀಡಿ ಪರಿಶೀಲಿಸಿ ಸರ್.

ಮಂಡ್ಯದ ಜಿಲ್ಲಾಸ್ಪತ್ರೆಯಲ್ಲಿ (ಮಿಮ್ಸ್) (MIMS) ವೈದ್ಯರಿದ್ದಾರೆ, ಡೀನ್ ಇದ್ದಾರೆ, ನರ್ಸ್ ಮತ್ತು ಇತರ ಸಿಬ್ಬಂದಿ ಎಲ್ಲ ಇದ್ದಾರೆ. ಅದರೆ ಮನುಷ್ಯತ್ಯ, ಮಾನವೀಯ ಕಳಕಳಿ ಮಾತ್ರ ಸಂಪೂರ್ಣವಾಗಿ ಕಾಣೆಯಾಗಿದೆ. ಈ ವ್ಯಕ್ತಿಯ ಪಡಿಪಾಟಲು ಕೊಂಚ ಗಮನಿಸಿ. ರಾಮನಗರದವರಾದ (Ramanagara) ಇವರ ಮಗಳಿಗೆ ಹೊಟ್ಟೆಯಲ್ಲಿ ಏನೋ ಸಮಸ್ಯೆಯಾಗಿ ಮಿಮ್ಸ್ ಗೆ ತಂದಿದ್ದಾರೆ. ಅಲ್ಲಿನ ವೈದ್ಯರು ಸ್ಕ್ಯಾನಿಂಗ್ ಮಾಡಿಸಬೇಕು ಅಂದಿದ್ದಾರೆ, ಸ್ಕ್ಯಾನಿಂಗ್ ಸೆಂಟರ್ (scanning centre) ಆಸ್ಪತ್ರೆಯಿಂದ 1 ಕಿಮೀ ದೂರದಲ್ಲಿದೆ. ಅಲ್ಲಿಗೆ ರೋಗಿಯನ್ನು ಕರೆದೊಯ್ಯಲು ಒಂದು ವ್ಹೀಲ್ ಚೇರ್ ಕೊಡದ ಕಾರಣ ತಂದೆ ಬೆಳೆದ ಮಗಳನ್ನು ಕೈಯಲ್ಲಿ ಹೊತ್ತುಕೊಂಡು ಓಡಾಡುತ್ತಿದ್ದಾರೆ. ಡಾ ಸುಧಾಕರ್ ಸರ್ ಕೊಂಚ ಗಮನಿಸುತ್ತೀರಾ? ಅಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಉಪಕರಣ ಸರಿಯಿಲ್ಲವಂತೆ. ಒಮ್ಮೆ ಭೇಟಿ ನೀಡಿ ಪರಿಶೀಲಿಸಿ ಸರ್.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.