ಕಬಿನಿ ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ ಸಫಾರಿಗೆ ಹೋದ ಹುಲುಮಾನವರಿಗೆ ಹುಲಿ ಕುಟುಂಬದ ದರ್ಶನ!

ಕಬಿನಿ ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ ಸಫಾರಿಗೆ ಹೋದ ಹುಲುಮಾನವರಿಗೆ ಹುಲಿ ಕುಟುಂಬದ ದರ್ಶನ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 14, 2022 | 12:09 PM

ಹುಲಿಗಳು ತಮ್ಮ ಬಲಭಾಗದಿಂದ ಬರುತ್ತಿರುವ ಪ್ರವಾಸಿಗರ ಸಫಾರಿಯನ್ನು ಒಮ್ಮೆ ದಿಟ್ಟಿಸಿ ನೋಡಿ ನಂತರ ರಸ್ತೆಯನ್ನು ಕ್ರಾಸ್ ಮಾಡುತ್ತವೆ.

ಕಾಡಿನಲ್ಲಿ ಚಕ್ರಾಧಿಪತಿಗಳಂತೆ ನಿರ್ಭಯವಾಗಿ ತಿರುಗಾಡುವ ಹುಲಿಗಳಿಗೆ (tigers) ಹುಲುಮಾನವರ ಭಯವೇಕೆ (fear) ಇದ್ದೀತು, ಹೌದು ತಾನೆ? ಈ ವಿಡಿಯೋ ನೋಡಿ. ಕಬಿನಿ ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ (Kabini Dammankatte Wildlife Sanctuary) ಮಂಗಳವಾರ ಬೆಳಗ್ಗೆ ಸಫಾರಿಗೆ ಅಂತ ಹೋದವರಿಗೆ ಒಂದು ಅಮ್ಮ ಹುಲಿ ಮತ್ತದರ ಮರಿಗಳು ಎದುರಾಗಿವೆ. ಹುಲಿಗಳು ತಮ್ಮ ಬಲಭಾಗದಿಂದ ಬರುತ್ತಿರುವ ಪ್ರವಾಸಿಗರ ಸಫಾರಿಯನ್ನು ಒಮ್ಮೆ ದಿಟ್ಟಿಸಿ ನೋಡಿ ನಂತರ ರಸ್ತೆಯನ್ನು ಕ್ರಾಸ್ ಮಾಡುತ್ತವೆ. ಅದರೆ ಹಿಂದೆ ಉಳಿದು ಬಿಡುವ ಒಂದು ಹುಲಿಮರಿ ವಾಹನ ಬರುತ್ತಿರುವುದನ್ನು ಕಂಡು ವಾಪಸ್ಸು ಓಡುತ್ತದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 14, 2022 11:13 AM