ಕಾಂಗ್ರೆಸ್ ಪಕ್ಷ ಒಂದು ಸಮುದ್ರದಂತೆ ಬರುವವರಿಗೆಲ್ಲ ಸ್ವಾಗತ: ಎಸ್ ಎಸ್ ಮಲ್ಲಿಕಾರ್ಜುನ, ಸಚಿವ

|

Updated on: Sep 05, 2023 | 5:18 PM

ಅಸಲಿಗೆ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ತೀನಿ ಅಂತ ಎಲ್ಲೂ ಹೇಳಿಲ್ಲ, ಮನೆಗೆ ಬಂದು ಚಹಾ ಸೇವಿಸಿ ಹೋದವರಿಗೆಲ್ಲ ಪಕ್ಷ ಸೇರುತ್ತಾರೆಂದರೆ ಹೇಗೆ ಅಂತ ಅವರು ಕೇಳಿದರು. ಮುಂದುವರಿದು ಮಾತಾಡಿದ ಮಲ್ಲಿಕಾರ್ಜುನ, ಕಾಂಗ್ರೆಸ್ ಪಕ್ಷಕ್ಕೆ ಲೋಕ ಸಭೆ ಚುನಾವಣೆ ಗೆಲ್ಲಲೇಬೇಕಿದೆ. ಹಾಗಾಗಿ ಬಿಜೆಪಿಯಿಂದ ಬರೋರಿಗೆಲ್ಲ ಸ್ವಾಗತ ಎಂದು ಹೇಳಿದರು.

ದಾವಣಗೆರೆ: ನಗರದಲ್ಲಿಂದು ಮಾಧ್ಯಮ ಪ್ರತಿನಿಧುಗಳೊಂದಿಗೆ ಮಾತಾಡಿದ ಭೂ ಮತ್ತು ಗಣಿ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ (SS Mallikarjun) ಬಿಜೆಪಿಯ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಬಗ್ಗೆ ಮೃದು ದೋರಣೆ ಪ್ರದರ್ಶಿಸಿದರು. ರೇಣುಕಾಚಾರ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ (Congress Party) ಸೇರಿಸಿಕೊಳ್ಳುವುದು ಬೇಡ ಅಂತ ಅವರು ಮೊದಲು ವರಿಷ್ಠರಿಗೆ ಹೇಳಿದ್ದರಂತೆ. ಅವರನ್ನು ಸ್ವಾಗತಿಸುತ್ತೀರಾ ಅಂತ ಇವತ್ತು ಕೇಳಿದ ಪ್ರಶ್ನೆಗೆ ಮಲ್ಲಿಕಾರ್ಜುನ ಬರೋರಿಗೆ ಯಾರು ಬೇಡ ಅನ್ನುತ್ತಾರೆ, ಕಾಂಗ್ರೆಸ್ ಪಕ್ಷ ಒಂದು ಸಮುದ್ರವಿದ್ದಂತೆ, ಹಲವಾರು ಜನ ಬರುತ್ತಾರೆ, ಹಲವಾರು ಜನ ಹೋಗುತ್ತಾರೆ, ಯಾರನ್ನೂ ತಡೆಯಲಾಗಲ್ಲ ಎಂದು ಹೇಳಿದರು. ಅಸಲಿಗೆ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ತೀನಿ ಅಂತ ಎಲ್ಲೂ ಹೇಳಿಲ್ಲ, ಮನೆಗೆ ಬಂದು ಚಹಾ ಸೇವಿಸಿ ಹೋದವರಿಗೆಲ್ಲ ಪಕ್ಷ ಸೇರುತ್ತಾರೆಂದರೆ ಹೇಗೆ ಅಂತ ಅವರು ಕೇಳಿದರು. ಮುಂದುವರಿದು ಮಾತಾಡಿದ ಮಲ್ಲಿಕಾರ್ಜುನ, ಕಾಂಗ್ರೆಸ್ ಪಕ್ಷಕ್ಕೆ ಲೋಕ ಸಭೆ ಚುನಾವಣೆ ಗೆಲ್ಲಲೇಬೇಕಿದೆ. ಹಾಗಾಗಿ ಬಿಜೆಪಿಯಿಂದ ಬರೋರಿಗೆಲ್ಲ ಸ್ವಾಗತ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ