Mysuru Manasagangotri: ನೆಲದಲ್ಲಿ ಕುಳಿತು ಪಾಠ ಕೇಳಿದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು

Mysuru Manasagangotri: ನೆಲದಲ್ಲಿ ಕುಳಿತು ಪಾಠ ಕೇಳಿದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು

ದಿಲೀಪ್​, ಚೌಡಹಳ್ಳಿ
| Updated By: ಆಯೇಷಾ ಬಾನು

Updated on: Sep 05, 2023 | 3:46 PM

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕ ಆಂತರಿಕ ಕಚ್ಚಾಟದಿಂದಾಗಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ನೆಲದಲ್ಲಿ ಕುಳಿತು ಪಾಠ ಕೇಳುವಂತಾಗಿದೆ.ರಾತ್ರೋರಾತ್ರಿ ವಿಭಾಗವನ್ನ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ಹಳೆ ಕಟ್ಟಡದ ತರಗತಿಯ ಕೊಠಡಿಗಳಿಗೆ ಬೀಗ ಹಾಕಿರುವುದರಿಂದ ಕಾರಿಡಾರ್​​ನಲ್ಲೇ ವಿದ್ಯಾರ್ಥಿಗಳನ್ನು ಕೂರಿಸಿ ಪ್ರಾಧ್ಯಾಪಕರು ಪಾಠ ಮಾಡಿದ್ದಾರೆ.

ಮೈಸೂರು, ಸೆ.05: ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯದ (Manasagangotri University) ಪತ್ರಿಕೋದ್ಯಮ (Journalism) ವಿಭಾಗದ ಪ್ರಾಧ್ಯಾಪಕರ ಆಂತರಿಕ ಕಚ್ಚಾಟದಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಹೌದು ಪ್ರಾಧ್ಯಾಪಕರ ಆಂತರಿಕ ಕಚ್ಚಾಟದಿಂದ ರಾತ್ರೋರಾತ್ರಿ ವಿಭಾಗವನ್ನೇ ಬೇರೆಡೆ ಸ್ಥಳಾಂತರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬೆಳಿಗ್ಗೆ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ವಿಭಾಗದ ಬಳಿ ಬಂದು ನೋಡಿದಾಗ ವಿಭಾಗದ ಮುಖ್ಯಸ್ಥೆ ಪ್ರೊ. ಸಪ್ನಾ ಅವರು “ವಿಭಾಗವನ್ನು ಸ್ಥಳಾಂತರ ಮಾಡಲಾಗಿದೆ” ಎಂದು ವಿಭಾಗದ ಬಾಗಿಲಿಗೆ ಚೀಟಿ ಅಂಟಿಸಿ ಹೋಗಿದ್ದಾರೆ.

ಇದರಿಂದ ವಿಭಾಗದ ಕಾರಿಡಾರ್​ನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪ್ರಾಧ್ಯಾಪಕರು ಪಾಠ ಮಾಡಿದ್ದಾರೆ. ಈ ಬಗ್ಗೆ ಪ್ರಾಧ್ಯಾಪಕರು ಟಿವಿ9 ನೊಂದಿಗೆ ಮಾತನಾಡಿ “ನಮಗೆ ವಿಭಾಗ ಬದಲಾಗಿರುವ ಬಗ್ಗೆ ಮೈಸೂರು ವಿವಿಯಿಂದ ಅಧಿಕೃತ ಆದೇಶ ಬಂದಿಲ್ಲ. ಇದರಿಂದ ನಾವು ಇಲ್ಲಿ ಉಳಿದುಕೊಂಡಿದ್ದೇವೆ. 50 ವರ್ಷಗಳ ಹಳೆಯ ದಾಖಲಾತಿಗಳು ಇಲ್ಲಿ ಇವೆ. ದಾಖಲಾತಿಗಳ ಪಂಚನಾಮೆ ಮಾಡಿದ ಬಳಿಕ ಸ್ಥಳಾಂತರ ಮಾಡಬೇಕಿತ್ತು ಎಂದು ವಿಭಾಗದ ಪ್ರಾಧ್ಯಾಪಕರು ಹೇಳಿದರು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ