ಕುಣಿತ ಮತ್ತು ಸಚಿವ ಎಮ್ ಟಿ ಬಿ ನಾಗರಾಜ್ ಮೇಡ್ ಫಾರ್ ಈಚ್ ಅದರ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 12, 2022 | 12:38 PM

ಅದಕ್ಕೆ ಕ್ಯಾರೆ ಅನ್ನದ ಸಚಿವರು ಹೊಸಕೋಟೆಯ ಸೂಲಿಬೆಲೆಯಲ್ಲಿ ನಡೆದ ಉತ್ಸವವೊಂದರಲ್ಲಿ ಒಮ್ಮೆ ಖಡ್ಗ ಹಿಡಿದು ಮತ್ತೊಮ್ಮೆ ಬಾಯಲ್ಲಿ ನಿಂಬೆಹಣ್ಣು ಕಚ್ಚಿಕೊಂಡು ಕುಣಿದಿದ್ದೇ ಕುಣಿದಿದ್ದು.

ಹೊಸಕೋಟೆ: ಪೌರಾಡಳಿತ ಸಚಿವ ಎಮ್ ಟಿ ಬಿ ನಾಗರಾಜ್ (MTB Nagaraj) ಅವರು ಕಾಂಗ್ರೆಸ್ ನಿಂದ ಬೇರ್ಪಟ್ಟಿರಬಹುದು ಅದರೆ ಕುಣಿತವನ್ನು (dance) ಅವರಿಂದ ಬೇರ್ಪಡಿಸುವುದು ಸಾಧ್ಯವಿಲ್ಲ ಅನಿಸುತ್ತೆ ಮಾರಾಯ್ರೇ. ಅವರ ಕುಣಿತವಿಲ್ಲದೆ ಊರ ಉತ್ಸವಗಳು, ಪಕ್ಷದ ಸಮಾವೇಶಗಳು ಪೂರ್ಣಗೊಳ್ಳಲಾರವು. ದೊಡ್ಡಬಳ್ಳಾಪುರದಲ್ಲಿ (Doddaballapura) ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ವೇದಿಕೆ ಮೇಲೆ ಕುಣಿದಿದನ್ನು ಕಾಂಗ್ರೆಸ್ ನವರು ಟ್ರೋಲ್ ಮಾಡಿದರು. ಅದಕ್ಕೆ ಕ್ಯಾರೆ ಅನ್ನದ ಸಚಿವರು ಹೊಸಕೋಟೆಯ ಸೂಲಿಬೆಲೆಯಲ್ಲಿ ನಡೆದ ಉತ್ಸವವೊಂದರಲ್ಲಿ ಒಮ್ಮೆ ಖಡ್ಗ ಹಿಡಿದು ಮತ್ತೊಮ್ಮೆ ಬಾಯಲ್ಲಿ ನಿಂಬೆಹಣ್ಣು ಕಚ್ಚಿಕೊಂಡು ಕುಣಿದಿದ್ದೇ ಕುಣಿದಿದ್ದು.