Loading video

ಕೇವಲ ಈ ಅವಧಿ ಮಾತ್ರ ಅಲ್ಲ, ಮುಂದಿನ 5-ವರ್ಷ ಅವಧಿಗೂ ನಮ್ಮ ಸರ್ಕಾರ ಅಧಿಕಾರದಲ್ಲಿರುತ್ತದೆ: ಡಿಕೆ ಶಿವಕುಮಾರ್

|

Updated on: Apr 15, 2024 | 10:58 AM

ಮೈಸೂರು-ಕೊಡಗು ಮತ್ತು ಮಂಡ್ಯ ಕ್ಷೇತ್ರಗಳಲ್ಲಿನ ಒಕ್ಕಲಿಗ ಸಮುದಾಯದ ಜನ ಹೊರಗಿನವರನ್ನು ಯಾವತ್ತೂ ಸಹಿಸಲ್ಲ, ಮೈಸೂರಿನ ಅಭ್ಯರ್ಥಿ ಎಂ ಲಕ್ಷ್ನಣ್ ಸ್ಥಳೀಯರಾಗಿದ್ದಾರೆ ಮತ್ತು ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದಣಿವರಿಯದೆ ದುಡಿಯುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮೈಸೂರು ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಮತ (Vokkaliga community) ಸೆಳೆಯಲು ಮುಂದಾಗಿದ್ದು ಮೈಸೂರಲ್ಲಿ ಇಂದು ಒಕ್ಕಲಿಗರ ಸಭೆಯಲ್ಲಿ ಮಾತಾಡುವಾಗ ಒಬ್ಬ ಒಕ್ಕಲಿಗನಾಗಿ ತಾನು ಬೆಳೆದು ಬಂದಿದ್ದು, ಕೆಪಿಸಿಸಿ ಅಧ್ಯಕ್ಷನಾಗಿದ್ದು ಮತ್ತು ಸಿಬಿಐ ದಾಳಿಗೊಳಗಾಗಿ ಜೈಲಿಗೆ ಹೋಗಿದ್ದು ಮೊದಲಾದ ವಿಷಯಗಳನ್ನು ಮಾತಾಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬೇಜವಾಬ್ದಾರಿತದಿಂದ ಅಧಿಕಾರ ದುರುಪಯೋಗಪಡಿಸಿಕೊಂಡ ಕಾರಣ ಸರ್ಕಾರದ ಪತನವಾಯಿತು ಎಂದು ಶಿವಕುಮಾರ್ ಹೇಳಿದರು. ಮೈಸೂರು-ಕೊಡಗು ಮತ್ತು ಮಂಡ್ಯ ಕ್ಷೇತ್ರಗಳಲ್ಲಿನ ಒಕ್ಕಲಿಗ ಸಮುದಾಯದ ಜನ ಹೊರಗಿನವರನ್ನು ಯಾವತ್ತೂ ಸಹಿಸಲ್ಲ, ಮೈಸೂರಿನ ಅಭ್ಯರ್ಥಿ ಎಂ ಲಕ್ಷ್ನಣ್ ಸ್ಥಳೀಯರಾಗಿದ್ದಾರೆ ಮತ್ತು ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದಣಿವರಿಯದೆ ದುಡಿಯುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಮುಖ್ಯಮಂತ್ರಿಯಾಗುವ ಬಯಕೆಯನ್ನು ಮತ್ತೊಮ್ಮೆ ಪರೋಕ್ಷವಾಗಿ ಹೊರಹಾಕಿದ ಶಿವಕುಮಾರ್ ತಮ್ಮ ಸರ್ಕಾರ ಈ ಅವಧಿಗೆ ಮಾತ್ರ ಅಲ್ಲ ಮುಂದಿನ 5-ವರ್ಷದ ಅವಧಿಗೂ ಅಧಿಕಾರದಲ್ಲಿರುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಫ್ರಿಜ್ಡ್ ಖರೀದಿಸಿದ ಮಹಿಳೆಗೆ ಡಿಸಿಎಂ ಡಿಕೆ ಶಿವಕುಮಾರ್ ಮೆಚ್ಚುಗೆ