ಶಿವಮೊಗ್ಗದಲ್ಲಿ ಸಿದ್ದರಾಮಯ್ಯನವರಿಗೆ ಹೆಲಿಕಾಪ್ಟರ್ ಹತ್ತಿಸಿದ ಕಾಂಗ್ರೆಸ್ ಕಾರ್ಯಕರ್ತರು!

Edited By:

Updated on: Nov 29, 2022 | 1:04 PM

ಶಿವಮೊಗ್ಗ ಪ್ರವಾಸ ಮುಗಿಸಿಕೊಂಡು ಮಂಡ್ಯದ ಕಡೆ ತೆರಳಲು ತಮ್ಮ ಚಾಪರ್ ಲ್ಯಾಂಡ್ ಆಗಿದ್ದ ಹೆಲಿಪ್ಯಾಡ್ ನತ್ತ ಬಂದಾಗ ಜೈಕಾರ ಕೂಗುತ್ತಾ ಹಿಂಬಾಲಿಸಿದ ಕಾರ್ಯಕರ್ತರು ಅವರಿಗೆ ಹೆಲಿಕಾಪ್ಟರ್ ಹತ್ತಲು ನೆರವಾದರು.

ಶಿವಮೊಗ್ಗ: ನಾವೆಲ್ಲ ರೈಲು ಹತ್ತಿಸಿದರು ಅಂತ ಹೇಳೋದನ್ನು ಕೇಳಿಸಿಕೊಂಡಿದ್ದೇವೆ. ಆದರೆ ಶಿವಮೊಗ್ಗಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯನವರನ್ನು (Siddaramaiah) ಹೆಲಿಕಾಪ್ಟರ್ ಹತ್ತಿಸಿದರು! ಮಾಜಿ ಮುಖ್ಯಮಂತ್ರಿಗಳು ಮಂಗಳವಾರ ಬೆಳಗ್ಗೆ ಶಿವಮೊಗ್ಗ (Shivamogga) ಪ್ರವಾಸ ಮುಗಿಸಿಕೊಂಡು ಮಂಡ್ಯದ (Mandya) ಕಡೆ ತೆರಳಲು ತಮ್ಮ ಚಾಪರ್ ಲ್ಯಾಂಡ್ ಆಗಿದ್ದ ಹೆಲಿಪ್ಯಾಡ್ ನತ್ತ ಬಂದಾಗ ಜೈಕಾರ ಕೂಗುತ್ತಾ ಹಿಂಬಾಲಿಸಿದ ಕಾರ್ಯಕರ್ತರು ಅವರಿಗೆ ಹೆಲಿಕಾಪ್ಟರ್ ಹತ್ತಲು ನೆರವಾದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ