ಬಿಜೆಪಿ ಸಂಸದರು ಹಂತಕನ ಜೊತೆ ಕಾಣಿಸಿಕೊಂಡರೆ ಅವನನ್ನು ಬಂಧಿಸುವ ಧೈರ್ಯ ಪೊಲೀಸರಿಗೆ ಎಲ್ಲಿಂದ ಬಂದೀತು? ಸಿದ್ದರಾಮಯ್ಯ
ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಒಬ್ಬ ಕುಖ್ಯಾತ ರೌಡಿಯ ಜೊತೆ ಸಂಸದರು ಕಾಣಿಸಿಕೊಂಡರೆ ಅವನನ್ನು ಹಿಡಿಯಲು ಪೊಲೀಸರಿಗೆ ಧೈರ್ಯ ಎಲ್ಲಿಂದ ಬರುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಶಿವಮೊಗ್ಗ: ಕೊಲೆ, ಸುಲಿಗೆ, ಡಕಾಯಿತಿ ಆರೋಪಗಳಲ್ಲಿ ಜೈಲು ಸೇರಿದ್ದ ಕುಖ್ಯಾತ ರೌಡಿ ಸೈಲೆಂಟ್ ಸುನಿಲನ (Silent Sunil) ಜೊತೆ ಬಿಜೆಪಿ ನಾಯಕರು ಮತ್ತು ಸಂಸದರೂ ಅಗಿರುವ ತೇಜಸ್ವೀ ಸೂರ್ಯ (Tejasvi Surya) ಮತ್ತು ಪಿಸಿ ಮೋಹನ (PC Mohan) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಭಾರಿ ವಿವಾದ ಸೃಷ್ಟಿಸಿದೆ ಮತ್ತು ಪಕ್ಷಕ್ಕೆ ದೊಡ್ಡ ಮುಜುಗುರವನ್ನುಂಟು ಮಾಡಿದೆ. ಶಿವಮೊಗ್ಗದಲ್ಲಿ ಮಂಗಳವಾರ ಮಾಧ್ಯಮದವರ ಜೊತೆ ಮಾತಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಸಿಸಿಬಿ ಅರಸುತ್ತಿರುವ ಮತ್ತು ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಒಬ್ಬ ರೌಡಿಯ ಜೊತೆ ಸಂಸದರು ಕಾಣಿಸಿಕೊಂಡರೆ ಅವನನ್ನು ಹಿಡಿಯಲು ಪೊಲೀಸರಿಗೆ ಧೈರ್ಯ ಎಲ್ಲಿಂದ ಬರುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos