ಬಳ್ಳಾರಿ: ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರ ನೆಲಕ್ಕೆ ಬಿದ್ದು ಸಾಯುವ ಮೊದಲು 10 ಅಡಿ ಮೇಲಕ್ಕೆ ಚಿಮ್ಮಲ್ಪಟ್ಟ!
ಸಾವನ್ನಪ್ಪಿದ ವ್ಯಕ್ತಿಯನ್ನು ಅದೇ ಗ್ರಾಮದ ಹನುಮರೆಡ್ಡಿಎಂದು ಗುರುತಿಸಲಾಗಿದ್ದು ಕಾರು ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಬಳ್ಳಾರಿ: ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯ ಭಯಾನಕ. ತನ್ನ ಬಲಭಾಗದ ಕಡೆಯಿಂದ ಕಾರೊಂದು ವೇಗವಾಗಿ ಬರುತ್ತಿದ್ದರೂ ಬೈಕ್ ಸವಾರ ರಸ್ತೆ ಕ್ರಾಸ್ ಮಾಡಲು ಹೋಗುತ್ತಾರೆ. ನಂತರದ ಸನ್ನಿವೇಶವನ್ನು ನೋಡಲು ಭಯವಾಗುತ್ತದೆ. ವೇಗದಲ್ಲಿ ಬರುವ ಕಾರು ದ್ವಿಚಕ್ರವಾಹನಕ್ಕೆ (two wheeler) ಗುದ್ದಿದ ರಭಸಕ್ಕೆ ಸುಮಾರು 10-12 ಅಡಿ ಮೇಲೆ ಹಾರುವ ಸವಾರ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭೀಕರ ಅಪಘಾತ ನಡೆದಿರೋದು ಬಳ್ಳಾರಿ ಜಿಲ್ಲೆ ಸಿರಗುಪ್ಪ (Sirguppa) ತಾಲ್ಲೂಕಿನ ಕೊತ್ತಲಚಿಂತ ಗ್ರಾಮ ಹೊರವಲಯದ ಹೆದ್ದಾರಿಯಲ್ಲಿ. ಸಾವನ್ನಪ್ಪಿದ ವ್ಯಕ್ತಿಯನ್ನು ಅದೇ ಗ್ರಾಮದ ಹನುಮರೆಡ್ಡಿ (Hanuma Reddy) ಎಂದು ಗುರುತಿಸಲಾಗಿದ್ದು ಕಾರು ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos