AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

My India My Life Goals: ಸಂತಾನವಿಲ್ಲದ ಕೊರಗನ್ನು ಸಸಿನೆಟ್ಟು ಫೋಷಿಸಿ ನೀಗಿಸಿಕೊಂಡ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಕನ್ನಡಿಗರ ಹೆಮ್ಮೆ!

My India My Life Goals: ಸಂತಾನವಿಲ್ಲದ ಕೊರಗನ್ನು ಸಸಿನೆಟ್ಟು ಫೋಷಿಸಿ ನೀಗಿಸಿಕೊಂಡ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಕನ್ನಡಿಗರ ಹೆಮ್ಮೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 21, 2023 | 5:11 PM

Share

ತಮ್ಮ ನಿಸ್ವಾರ್ಥ ಕಾಯಕದ ಮೂಲಕ ನಾಡಿನ ಸಮಸ್ತ ಕನ್ನಡಿಗರಿಗೆ ಪ್ರೇರಣೆಯಾಗಿರುವ ಸಾಲುಮರದ ತಿಮ್ಮಕ್ಕರನ್ನು ವೃಕ್ಷಮಾತೆ ಅಂತ ಕರೆಯುವುದು ಅತ್ಯಂತ ಸೂಕ್ತವೆನಿಸುತ್ತದೆ.

ಬೆಂಗಳೂರು: ಸಾಲುಮರದ ತಿಮ್ಮಕ್ಕನ (Salumarada Timmakka) ಪರಿಚಯ ಯಾರಿಗಿಲ್ಲ. ಕನ್ನಡನಾಡಿನ ಹೆಮ್ಮೆಯ ಪರಿಸರವಾದಿ (environmentalist) ಮತ್ತು ವೃಕ್ಷಮಾತೆ ಅವರು. ನಮ್ಮ ಪರಿಸರಕ್ಕೆ ಅವರು ನೀಡಿರುವ ಕೊಡುಗೆ ಅಪಾರ ಮತ್ತು ಅನನ್ಯ. ಅವರಿಗೀಗ 112 ರ ಪ್ರಾಯ ಮತ್ತು ಅವರೇ ಹೇಳುವಂತೆ ಕಳೆದ 65 ವರ್ಷಗಳಿಂದ ಸಸಿಗಳನ್ನು ನೆಟ್ಟು ಅವು ಮರವಾಗುವುದನ್ನು ನೋಡುತ್ತಿದ್ದಾರೆ. ಇದುವರೆಗೆ 8,000 ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ. ಪರಿಸರದ ಉಳಿವಿಗೆ ಅವರ ನೀಡಿರುವ ಮಹತ್ತರ ಕೊಡುಗೆಯನ್ನು ಗೌರವಿಸಿ ಭಾರತ ಸರ್ಕಾರ 2019ರಲ್ಲಿ ಅವರಿಗೆ ಪದ್ಮಶ್ರೀ (Padma Shri) ಪ್ರಶಸ್ತಿಯಿಂದ ಪುರಸ್ಕರಿಸಿದೆ. ಈ ಇಳಿವಯಸ್ಸಿನಲ್ಲೂ ಅವರು ಸಸಿಗಳನ್ಮು ನೆಡುತ್ತಾರೆ. ಪತಿ ಚಿಕ್ಕರಂಗಯ್ಯ ಕೂಡ ಸಸಿನೆಡುವಲ್ಲಿ ತಿಮ್ಮಕ್ಕನಿಗೆ ನೆರವಾಗುತ್ತಿದ್ದರು. ದಂಪತಿಗೆ ಸಂತಾನ ಭಾಗ್ಯವಿರಲಿಲ್ಲ. ಆ ಕೊರತೆ, ದುಃಖ ಮತ್ತು ನೋವನ್ನು ಸಸಿ ನೆಟ್ಟು ಪೋಷಿಸುವ ಮೂಲಕ ನೀಗಿಸಿಕೊಳ್ಳುತ್ತಿದ್ದರು. ತಮ್ಮ ನಿಸ್ವಾರ್ಥ ಕಾಯಕದ ಮೂಲಕ ನಾಡಿನ ಸಮಸ್ತ ಕನ್ನಡಿಗರಿಗೆ ಪ್ರೇರಣೆಯಾಗಿರುವ ಸಾಲುಮರದ ತಿಮ್ಮಕ್ಕರನ್ನು ವೃಕ್ಷಮಾತೆ ಅಂತ ಕರೆಯುವುದು ಅತ್ಯಂತ ಸೂಕ್ತವೆನಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ