ನಮ್ಮ ಕುಟುಂಬದ ತೇಜೋವಧೆ ಮಾಡಲು ಷಡ್ಯಂತ್ರ ರಚಿಸಲಾಗಿದೆ: ಡಾ ಸೂರಜ್ ರೇವಣ್ಣ, ಪರಿಷತ್ ಸದಸ್ಯ

|

Updated on: Jul 23, 2024 | 4:53 PM

ಹೊಳೆನರಸೀಪುರದ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಅಸಹಜ ಲೈಂಗಿಕ ಕ್ರೀಡೆ ನಡೆಸಿದ ಅರೋಪದಲ್ಲಿ ಹೆಚ್ ಡಿ ರೇವಣ್ಣ ಅವರ ಮೊದಲ ಮಗ ಸೂರಜ್ ರೇವಣ್ಣರನ್ನು ಬಂಧಿಸಲಾಗಿತ್ತು. ಶಾಸಕನ ಎರಡನೇ ಮಗ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಅರೋಪದಲ್ಲಿ ಜೈಲಲ್ಲಿದ್ದಾರೆ.

ಆನೇಕಲ್ (ಬೆಂಗಳೂರು): ನ್ಯಾಯಾಲಯದಿಂದ ಷರತ್ತುಬದ್ಧ ಜಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ ಜೈಲಿನ ಮುಂಭಾಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದೆ. ಆದರೆ ಸತ್ಯವನ್ನು ಯಾವತ್ತೂ ಮುಚ್ಚಿಡಲಾಗಲ್ಲ, ತಮ್ಮ ವಿರುದ್ಧ ನಡೆದ ಕುತಂತ್ರವೆಲ್ಲ ಮುಂದೆ ಬಯಲಾಗಲಿದೆ ಎಂದು ಸೂರಜ್ ಹೇಳಿದರು. ತಾನು ಯಾವುದಕ್ಕೂ ಹೆದರಿ ಓಡಿಹೋಗುವವನಲ್ಲ, ತನಿಖಾಧಿಕಾರಿಗಳೊಂದಿಗೆ ಸಹಕರಿಸಿದ್ದೇನೆ, ನಾಡಿನ ನ್ನಾಯಾಂಗದ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ ಅವರು 2-3 ದಿನಗಳ ನಂತರ ಎಲ್ಲ ಘಟನಾವಳಿಯ ಸ್ಪಷ್ಟೀಕರಣ ನೀಡುತ್ತೇನೆ ಎಂದು ಸೂರಜ್ ರೇವಣ್ಣ ಹೇಳಿದರು. ಜೈಲಿಂದ ಹೊರಬಂದ ಬಳಿಕ ಅವರು ನೇರವಾಗಿ ಬಸವನಗುಡಿಯಲ್ಲಿರುವ ತಮ್ಮ ತಂದೆ ಹೆಚ್ ಡಿ ರೇವಣ್ಣರ ಮನೆಗೆ ಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು