Assembly polls: ಸಿದ್ದರಾಮಯ್ಯಗೆ ಮುಂದುವರಿದ ಕ್ಷೇತ್ರ ಗೊಂದಲ, ಪತ್ರಕರ್ತರ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ!

|

Updated on: Mar 18, 2023 | 11:03 AM

ಎಲ್ಲಿಂದ ಸ್ಪರ್ಧೆ ಅನ್ನುವ ಬಗ್ಗೆ ಒಂದೋ ರಾಹುಲ್ ಗಾಂಧಿ ಬಹಿರಂಗಗೊಳಿಸಬೇಕು ಇಲ್ಲವೇ ತಾನು ಹೇಳಬೇಕು ಅಂತ ಹೇಳುವ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಉಲ್ಲೇಖಿಸುವುದಿಲ್ಲ.

ನವದೆಹಲಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Assembly Polls) ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋದು ಶತಕೋಟಿ ರೂಪಾಯಿ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಕೋಲಾರ ಬೇಡ ವರುಣಾದಿಂದಲೇ ಸ್ಪರ್ಧಿಸಿ ಅಂತಿದೆ. ಆಫ್ ಕೋರ್ಸ್, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಯುಗಾದಿಯ ನಂತರ ಬಿಡುಗಡೆ ಮಾಡಲಿದೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ. ತಾವು ಎಲ್ಲಿಂದ ಸ್ಪರ್ಧಿಸಬೇಕು ಅಂತ ಅಂತಿಮಗೊಂಡಿಲ್ಲ, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು. ಎಲ್ಲಿಂದ ಸ್ಪರ್ಧೆ ಅನ್ನುವ ಬಗ್ಗೆ ಒಂದೋ ರಾಹುಲ್ ಗಾಂಧಿ (Rahul Gandhi) ಬಹಿರಂಗಗೊಳಿಸಬೇಕು ಇಲ್ಲವೇ ತಾನು ಹೇಳಬೇಕು ಅಂತ ಹೇಳುವ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಹೆಸರು ಉಲ್ಲೇಖಿಸುವುದಿಲ್ಲ. ಅದು ಉದ್ದೇಶಪೂರ್ವಕವೋ ಅಥವಾ ಅಚಾತುರ್ಯವೋ ಅಂತ ಗೊತ್ತಾಗಲಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 18, 2023 10:59 AM