Non Veg Food Row; ಮಾಂಸ ತಿನ್ನೋದು, ದೇವಸ್ಥಾನಕ್ಕೆ ಹೋಗೋದು ಚರ್ಚೆಯ ವಿಷಯಗಳೇ ಅಲ್ಲ: ಸಿದ್ದರಾಮಯ್ಯ
ಮಾಂಸ ತಿನ್ನುವುದು, ತಿನ್ನದಿರುವುದು, ಮಾಂಸದೂಟ ತಿಂದು ದೇವಸ್ಥಾನಕ್ಕೆ ಹೋಗುವುದು ಚರ್ಚೆಯ ವಿಷಯಗಳೇ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆ: ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ಗೊತ್ತಾದ ಬಳಿಕ ಸಿದ್ದರಾಮಯ್ಯ (CT Ravi) ಅದನ್ನು ಉಗ್ರವಾಗಿ ಖಂಡಿಸುತ್ತಾರೆ, ರವಿಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಅಂತ ಭಾವಿಸಿದವರಿಗೆ ನಿರಾಶೆ ಎದುರಾಗಿದೆ. ಇಂದು ಬಾಗಲಕೋಟೆಯ (Bagalkot) ಹುನುಗುಂದದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಾದಾಮಿ ಶಾಸಕರು, ಅಸಲಿಗೆ ಬಿಜೆಪಿ ನಾಯಕರಿಗೆ ಸ್ಪಷ್ಟವಾದ ವಿಚಾರಧಾರೆಯೇ ಇಲ್ಲ. ಮಾಂಸ ತಿನ್ನುವುದು, ತಿನ್ನದಿರುವುದು, ಮಾಂಸದೂಟ ತಿಂದು ದೇವಸ್ಥಾನಕ್ಕೆ ಹೋಗುವುದು ಚರ್ಚೆಯ ವಿಷಯಗಳೇ ಅಲ್ಲ, ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ