AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರನ್ನು ಸದನದಲ್ಲಿ ಮನಸಾರೆ ಕೊಂಡಾಡಿದ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್

ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರನ್ನು ಸದನದಲ್ಲಿ ಮನಸಾರೆ ಕೊಂಡಾಡಿದ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 22, 2023 | 4:55 PM

Share

ಸದನದಲ್ಲಿ ಯಡಿಯೂರಪ್ಪನವರು ಇದ್ದಾಗಲಷ್ಟೇ ಅದಕ್ಕೊಂದು ಕಳೆ ಬರುತ್ತದೆ, ಕಷ್ಟಗಳನ್ನು ಹೇಳಿಕೊಂಡಾಗ ನಿಸ್ವಾರ್ಥ ಮನೋಭಾವದಿಂದ ಸಹಾಯ ಮಾಡಿದ್ದಾರೆ ಎಂದು ರೂಪಕಲಾ ಹೇಳಿದರು.

ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನ ಮುಕ್ತಾಯದ ಹಂತಕ್ಕೆ ಬರುತ್ತಿದೆ. ಹಾಗಾಗಿ ಸದನದ ಕಲಾಪಗಳು ನೀರಸ ಅನಿಸುತ್ತಿವೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭೀಕರ ಅನಿಸುವಂಥ ವಾಗ್ವಾದಗಳು ಕ್ರಮೇಣ ಕಡಿಮೆಯಾಗುತ್ತಿವೆ. ಸದನದಲ್ಲಿ ಇಂದು ಮಾತಾಡಿದ ಕೆಜಿಎಫ್ ನ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ (Roopkala Shashidhar) ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯದ ಹಿರಿಯ ಮುತ್ಸದ್ದಿ ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ಮನಸಾರೆ ಹೊಗಳಿದರು. ಸದನದಲ್ಲಿ ಅವರು ಇದ್ದಾಗಲಷ್ಟೇ ಅದಕ್ಕೊಂದು ಕಳೆ ಬರುತ್ತದೆ, ಕಷ್ಟಗಳನ್ನು ಹೇಳಿಕೊಂಡಾಗ ನಿಸ್ವಾರ್ಥ ಮನೋಭಾವದಿಂದ ಸಹಾಯ ಮಾಡಿದ್ದಾರೆ ಎಂದು ರೂಪಕಲಾ ಹೇಳಿದರು. ಹಾಗೆಯೇ, ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ನೀರು ಹರಿಯುವಂತೆ ಮಾಡಿದ ಸಿದ್ದರಾಮಯ್ಯನವರನ್ನು (Siddaramaiah) ಕೂಡ ಶ್ಲಾಘಿಸಿದ ಶಾಸಕಿ, ವಿರೋಧ ಪಕ್ಷದ ನಾಯಕ ಕೋಲಾರ ಜಿಲ್ಲೆಯಿಂದ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿರುವುದು ಜಿಲ್ಲೆ ಜನತೆಯ ಸೌಭಾಗ್ಯ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ  ಕ್ಲಿಕ್ಕಿಸಿ