Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Polls: ಈಗ ಬಿರಿಯಾನಿ ತಿನ್ನಲು ಬರುವ ಜನ ಮತದಾನ ದಿನದಂದು ಬೂತಿಗೆ ಬಂದು ಬಾಡೂಟ ಹಾಕಿಸಿದವನಿಗೆ ವೋಟು ಹಾಕತ್ತಾರೆಯೇ?

Assembly Polls: ಈಗ ಬಿರಿಯಾನಿ ತಿನ್ನಲು ಬರುವ ಜನ ಮತದಾನ ದಿನದಂದು ಬೂತಿಗೆ ಬಂದು ಬಾಡೂಟ ಹಾಕಿಸಿದವನಿಗೆ ವೋಟು ಹಾಕತ್ತಾರೆಯೇ?

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 22, 2023 | 6:14 PM

ಅದು ಸರಿ, ಪಕ್ಷದ ವರಿಷ್ಠರಿಗೆ ಅವರು ಏನು ಹೇಳ ಹೊರಟಿದ್ದಾರೆ? ಇಲ್ಲಿ ಬಿರಿಯಾನಿಗಾಗಿ ಮುಗಿಬಿದ್ದವರೆಲ್ಲ ಅವರಿಗೆ ವೋಟ್ ಹಾಕ್ತಾರಂತ್ಲಾ? ಗೌಡರಿಗೆ ಎಲ್ಲೋ ಭ್ರಾಂತು ಮಾರಾಯ್ರೇ!

ಚಿಕ್ಕಬಳ್ಳಾಪುರ: ನಮ್ಮ ಜನರಿಗೆ ಬಾಡೂಟ (non veg food) ಅಂದರೆ ಬಹಳ ಇಷ್ಟ ಕಣ್ರೀ. ರಾಜ್ಯದ ಎಲ್ಲ ಭಾಗಗಳ ಜನಕ್ಕೆ ಮಾಂಸದೂಟ ಇಷ್ಟವಾಗುತ್ತದೆ. ನಾವು ಕೇವಲ ಮಾಂಸಾಹಾರಿಗಳ ಬಗ್ಗೆ ಮಾತಾಡುತ್ತಿದ್ದೇವೆ ಮಾರಾಯ್ರೇ, ಪಕ್ಕಾ ಸಸ್ಯಾಹಾರಿಗಳು ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ (Sidlaghatta) ಕ್ಷೇತ್ರದಿಂದ ಸ್ಪರ್ಧಿಸಲು ರಾಜೀವ್ ಗೌಡ (Rajiv Gowda) ಎನ್ನುವ ಕಾಂಗ್ರೆಸ್ ಕಾರ್ಯಕರ್ತ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲೇ ಅವರು ಕ್ಷೇತ್ರದ ಜನರಿಗೆ ಮಟನ್ ಬಿರಿಯಾನಿಯ ವ್ಯವಸ್ಥೆ ಮಾಡಿದ್ದಾರೆ. ಅದು ಸರಿ, ಪಕ್ಷದ ವರಿಷ್ಠರಿಗೆ ಅವರು ಏನು ಹೇಳ ಹೊರಟಿದ್ದಾರೆ? ಇಲ್ಲಿ ಬಿರಿಯಾನಿಗಾಗಿ ಮುಗಿಬಿದ್ದವರೆಲ್ಲ ಅವರಿಗೆ ವೋಟ್ ಹಾಕ್ತಾರಂತ್ಲಾ? ಗೌಡರಿಗೆ ಎಲ್ಲೋ ಭ್ರಾಂತು ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Feb 22, 2023 06:14 PM