Long Weekend: ಶನಿವಾರದಿಂದ ಸಾಲು ಸಾಲು ರಜೆ, ಖಾಸಗಿ ಬಸ್‌ಗಳಿಂದ ಯರಾಬಿರಿ ಟಿಕೆಟ್ ದರ ಹೆಚ್ಚಳ -ಒನ್ ಟು ಡಬಲ್ ರೇಟ್!
Private Bus Ticket Rate: ನಾಳೆ ಶನಿವಾರದಿಂದ ಸಾಲು ಸಾಲು ರಜೆಗಳೇ ಎದುರಾಗುತ್ತಿವೆ.. ಬೆಂಗಳೂರಿನಲ್ಲಿರೋ ಹೊರ ಜಿಲ್ಲೆಗಳ ಜನರು ತಮ್ಮೂರಿನ ಕಡೆ ಮುಖ ಮಾಡ್ತಿದ್ದಾರೆ. ಖಾಸಗಿ ಬಸ್ ಮಾಲೀಕರು, ಹಿಗ್ಗಾಮುಗ್ಗಾ ಟಿಕೆಟ್ ದರ ಹೆಚ್ಚಿಸೋ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ.
ನಾಳೆ ಶನಿವಾರದಿಂದ ಸಾಲು ಸಾಲು ರಜೆಗಳೇ (holiday) ಎದುರಾಗುತ್ತಿವೆ.. ಬೆಂಗಳೂರಿನಲ್ಲಿರೋ ಹೊರ ಜಿಲ್ಲೆಗಳ ಜನರು ತಮ್ಮೂರಿನ (native) ಕಡೆ ಮುಖ ಮಾಡ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಖಾಸಗಿ ಬಸ್ ಮಾಲೀಕರು, ಹಿಗ್ಗಾಮುಗ್ಗಾ ಟಿಕೆಟ್ ದರ (Bus Price) ಹೆಚ್ಚಿಸೋ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ. ನಾಳೆ ಶನಿವಾರದ ರಜೆ.. ಆ ಮೇಲೆ ಭಾನುವಾರ.. ಸೋಮವಾರ ಮತ್ತೊಂದು ರಜೆ ಹಾಕಿಕೊಂಡ್ರೆ ಮಂಗಳವಾರ ಆಗಸ್ಟ್ 15 ರ ರಜೆ.. ಹೀಗೆ ಸಾಲು ಸಾಲು ರಜೆ ಬರ್ತಿದ್ದಂತೆ ಬೆಂಗಳೂರಿನಲ್ಲಿ ಇದ್ದವರಿಗೆ ಹುಟ್ಟೂರಿನ ನೆನಪಾಗಿದೆ. ಇನ್ನು ಇಲ್ಲೇ ಸೆಟ್ಲ್ ಆದವರಿಗೆ ಪ್ರವಾಸಿ ಸ್ಥಳಗಳ ಕನಸು ಬಿದ್ದಿದೆ. ಹೀಗೆ ಕನಸು ಹೊತ್ತು ಖಾಸಗಿ ಬಸ್‌ಸ್ಯಾಂಡ್‌ಗಳ ಬಳಿ ಹೋದವರಿಗೆ ಶಾಕ್ ಎದುರಾಗಿತ್ತು. ಒನ್ ಟು ಡಬಲ್ ರೇಟ್ ಕೇಳಿ ಪ್ರಯಾಣಿಕರು ತಬ್ಬಿಬ್ಬಾಗಿದ್ರು. ಇಲ್ಲಿದೆ ಒಂದು ವಿಡಿಯೋ ವರದಿ ನೋಡಿ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 11, 2023 02:26 PM