ತುಮಕೂರು: ಅಕ್ಷರ ದಾಸೋಹ ಯೋಜನೆಯ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ, ಗ್ರಾಮಸ್ಥರಿಂದ ಕಳ್ಳಿಯರ ತರಾಟೆ

|

Updated on: Sep 23, 2023 | 11:26 AM

ಶಾಲೆಯ ಅಡುಗೆ ಸಿಬ್ಬಂದಿ ಲಲಿತಮ್ಮ ಮತ್ತು ಪುಟ್ಟಮ್ಮ ಅನ್ನೋರು ಅಕ್ಕಿ ಕದ್ದು ಮನೆಯಲ್ಲಿಟ್ಟುಕೊಂಡಿರುವುದನ್ನು ಇಲ್ಲಿ ನೋಡಬಹುದು. ಅಕ್ಕಿ ಮಾತ್ರ ಅಲ್ಲ ಇತರ ಅಡುಗೆ ಸಾಮಗ್ರಿಗಳನ್ನೂ ಈ ಜೋಡಿ ಕದಿಯುತ್ತಿತ್ತಂತೆ. ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಬಳಿಕ ತಪ್ಪಾಯ್ತು, ಇನ್ನು ಮಾಡಲ್ಲ ಅಂತ ಹೇಳುತ್ತಿದ್ದಾರೆ.

ತುಮಕೂರು: ಸರ್ಕಾರದ ಅಕ್ಷರ ದಾಸೋಹ (Akshara Dasoha) ಮತ್ತು ಕ್ಷೀರಭಾಗ್ಯ (Ksheera Bhagya) ಯೋಜನೆಗಳು ಸರ್ಕಾರೀ ಶಾಲೆಗಳಲ್ಲಿ ಓದುವ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕತೆಗಾಗಿ ರೂಪಿಸಿರುವಂಥವು. ಆದರೆ, ಮಧ್ಯಾಹ್ನದ ಉಪಹಾರಕ್ಕಾಗಿ ಸರ್ಕಾರ ಬಿಡುಗಡೆ ಮಾಡುವ ಅಕ್ಕಿಯನ್ನು ಅಡುಎಗ ಸಿಬ್ಬಂದಿ ಕದ್ದು ಮರಾಟಮಾಡುವ ಇಲ್ಲವೇ ಸ್ಯಂತಕ್ಕೆ ಉಪಯೋಗಿಸುವ ಪ್ರಕರಣಗಳು ಬಹಳ ಕಡೆ ನಡೆಯುತ್ತವೆ. ಹಲವಾರು ಸಂದರ್ಭಗಳಲ್ಲಿ ಶಾಲೆಗಳ ಶಿಕ್ಷಕರು ಇಲ್ಲವೇ ಮುಖ್ಯೋಪಾಧ್ಯಾಯರು ಕಳ್ಳವ್ಯವಹಾರ ಸೂತ್ರಧಾರಿಗಳಾಗಿರುತ್ತಾರೆ, ಹಾಗಾಗಿ ಅಕ್ರಮಗಳು ಬೆಳಕಿಗೆ ಬರೋದಿಲ್ಲ. ಆದರೆ, ಜಿಲ್ಲೆಯ ಕೊರಟಗೆರೆ ತಾಲ್ಲೂಕು ವಡ್ಡಗೆರೆ ಗ್ರಾಮದ (Vaddagere) ಜನ ತಮ್ಮೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದ ಅಕ್ಕಿ ಕಳ್ಳತನವನ್ನು ಬಯಲು ಮಾಡಿದ್ದಾರೆ. ಶಾಲೆಯ ಅಡುಗೆ ಸಿಬ್ಬಂದಿ ಲಲಿತಮ್ಮ (Lalithamma) ಮತ್ತು ಪುಟ್ಟಮ್ಮ (Puttamma) ಅನ್ನೋರು ಅಕ್ಕಿ ಕದ್ದು ಮನೆಯಲ್ಲಿಟ್ಟುಕೊಂಡಿರುವುದನ್ನು ಇಲ್ಲಿ ನೋಡಬಹುದು. ಅಕ್ಕಿ ಮಾತ್ರ ಅಲ್ಲ ಇತರ ಅಡುಗೆ ಸಾಮಗ್ರಿಗಳನ್ನೂ ಈ ಜೋಡಿ ಕದಿಯುತ್ತಿತ್ತಂತೆ. ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಬಳಿಕ ತಪ್ಪಾಯ್ತು, ಇನ್ನು ಮಾಡಲ್ಲ ಅಂತ ಹೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ