Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯಾಲಯದ ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಜಿ ಪರಮೇಶ್ವರ್

ಹಿಂದೆ ಬಂಗಾರಪ್ಪನವರ ಸರ್ಕಾರ ನ್ಯಾಯಾಲಯ ಆದೇಶ ಧಿಕ್ಕರಿಸಿದಾಗ ಸೇನಾ ಪಡೆ ಕಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಲಾಗಿತ್ತು, ಅಂಥ ಸ್ಥಿತಿ ಉಂಟಾಗಲಿಲ್ಲ ಅದು ಬೇರೆ ವಿಷಯ. ಈ ಅತ್ಯಂತ ಬಿಕ್ಕಟ್ಟಿನ ಸ್ಥಿತಿಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಜೊತೆ ಸಹಕರಿಸಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಪರಮೇಶ್ವರ್ ಹೇಳಿದರು.

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 23, 2023 | 12:15 PM

ಬೆಂಗಳೂರು: ಗೃಹ ಸಚಿವ ಜಿ ಪರಮೇಶ್ವರ್ (G Parameshwara) ವಿಷಯ ಯಾವುದೇ ಆಗಿರಲಿ ಬಹಳ ವಿವೇಚನೆಯಿಂದ ಮಾತಾಡುವ ಜಾಯಮಾನದವರು, ಅವರ ಮಾತಿನಲ್ಲಿ ತೂಕವಿರುತ್ತದೆ,. ಕಾವೇರಿ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರತಿಭಟನೆ ನಡೆಸಲಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕುಮಾರಸ್ವಾಮಿ ಪ್ರತಿಭಟನೆ ಮಾಡಲಿ ಆದರೆ ಸರ್ಕಾರದ ವಿರುದ್ಧ ಮಾಡೋದ್ರಲ್ಲಿ ಏನರ್ಥ? ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ನಿನ್ನೆ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡಲಿ. ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಹಿಂದಿನ ಸರ್ಕಾರಗಳು ನೇಮಕ ಮಾಡಿರುವ ಕಾನೂನು ತಂಡವೇ ರಾಜ್ಯದ ಪರವಾಗಿ ವಾದಮಾಡುತ್ತಿದೆ. ಹಾಗಿದ್ದಲ್ಲಿ ಲೀಗಲ್ ಟೀಮ್ ಮತ್ತು ಸರ್ಕಾರ ಹೇಗೆ ಅಸಮರ್ಥ ಆಗುತ್ತವೆ ಎಂದು ಪರಮೇಶ್ವರ್ ಕೇಳಿದರು. ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಏನಾಗುತ್ತದೆ ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಹಿಂದೆ ಬಂಗಾರಪ್ಪನವರ ಸರ್ಕಾರ ನ್ಯಾಯಾಲಯ ಆದೇಶ ಧಿಕ್ಕರಿಸಿದಾಗ ಸೇನಾ ಪಡೆ ಕಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಲಾಗಿತ್ತು, ಅಂಥ ಸ್ಥಿತಿ ಉಂಟಾಗಲಿಲ್ಲ ಅದು ಬೇರೆ ವಿಷಯ. ಈ ಅತ್ಯಂತ ಬಿಕ್ಕಟ್ಟಿನ ಸ್ಥಿತಿಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಜೊತೆ ಸಹಕರಿಸಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ