[lazy-load-videos-and-sticky-control id=”IJ6HTS6ljws”]
ಬೆಂಗಳೂರು: BIEC ಕೊವಿಡ್ ಸೆಂಟರ್ನಿಂದ ಪರಾರಿಯಾದ ಸೋಂಕಿತನನ್ನ BBMP ಮಾರ್ಷಲ್ಗಳು ಹಿಡಿಯಲು ಹೋದ ವೇಳೆ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ.
ಮಾದಾವರ ಬಳಿ ಇರುವ BIEC ಕೋವಿಡ್ ಸೆಂಟರ್ನಿಂದ ಸೋಂಕಿತನೊಬ್ಬ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಅಲ್ಲೇ ಭದ್ರತೆಗೆಂದು ನಿಯೋಜನೆಗೊಂಡಿದ್ದ ಬಿಬಿಎಂಪಿ ಮಾರ್ಷಲ್ಗಳು ಮತ್ತೊಂದು ಕಾರಿನಲ್ಲಿ ಆತನನ್ನು ಹಿಡಿಯಲು ಹಿಂಬಾಲಿಸಿದ್ದಾರೆ.
ಈ ವೇಳೆ ಮಾರ್ಷಲ್ಗಳಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಮಾರ್ಷಲ್ಗಳ ಪೈಕಿ ಒಬ್ಬರಿಗೆ ಗಾಯಗಳಾಗಿದೆ. ಉಳಿದವರು ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಾರಿಯಾಗಿರುವ ಸೋಂಕಿತನನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
Published On - 4:56 pm, Sun, 16 August 20