ಹೊಸ ತಿರುವು ಪಡೆದ ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ ಶಾಸಕ ರೆಡ್ಡಿ ಎಂಟ್ರಿ
ಬಳ್ಳಾರಿಯಲ್ಲಿ ಪಾಲಿಕೆ ಸದಸ್ಯ ವಿ. ಕುಬೇರ್ ಅವರಿಂದ ಎಇಇ ವೀರೆಶ್ ಮೇಲೆ ನಡೆದ ಹಲ್ಲೆ ಘಟನೆ ಕುರಿತು ಶಾಸಕ ನಾರಾ ಭರತ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಅಧಿಕಾರಿಗಳ ಮೇಲಿನ ಇಂತಹ ಹಲ್ಲೆ ತಪ್ಪು ಎಂದು ಖಂಡಿಸಿದ ಅವರು, ಘಟನೆಯ ಸತ್ಯಾಂಶ ತಿಳಿದು ನ್ಯಾಯಯುತವಾಗಿ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ಅಧಿಕಾರಿಗಳು ಮತ್ತು ಕಾರ್ಪೊರೇಟರ್‌ಗಳ ನಡುವೆ ಸಮನ್ವಯದ ಅಗತ್ಯವನ್ನೂ ಒತ್ತಿಹೇಳಿದ್ದಾರೆ.
ಬಳ್ಳಾರಿ, ಏಪ್ರಿಲ್ 03: ಬಳ್ಳಾರಿ ಪಾಲಿಕೆಯ 39ನೇ ವಾರ್ಡ್ ಕಾಂಗ್ರೆಸ್ ಸದಸ್ಯ ವಿ. ಕುಬೇರರಿಂದ AEE ವೀರೇಶ್ ಮೇಲೆ ಹಲ್ಲೆ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಸಲಾಂ ಬಳ್ಳಾರಿ ಕಾರ್ಯಕ್ರಮದ ವೇಳೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ, ಅದೇ ವಾರ್ಡಿನಲ್ಲಿ ನಾನು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದನ್ನ ತಿಳಿಗೊಳಿಸಿದ್ದೆ. ಬೇರೆಡೆ ತೆರಳುತ್ತಿದಂತೆ ಹಲ್ಲೆ ಮಾಡಿರುವುದು ಗೊತ್ತಾಗಿದೆ. ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು ಸಂಪೂರ್ಣ ತಪ್ಪು. ಅಧಿಕಾರಿಗಳಿಂದಲೇ ವ್ಯವಸ್ಥೆ ನಡೆಯುತ್ತದೆ ಮತ್ತು ಅವರು ಸಾರ್ವಜನಿಕ ಸೇವೆಗಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಈ ಘಟನೆಯಲ್ಲಿ ಯಾರು ತಪ್ಪಿತಸ್ಥರು ಎಂಬುದು ಇನ್ನೂ ತಿಳಿದಿಲ್ಲ. ಪೂರ್ಣ ಮಾಹಿತಿ ಪಡೆದು, ಯಾರಿಗೆ ಅನ್ಯಾಯವಾಗಿದೆಯೋ ಅವರಿಗೆ ನ್ಯಾಯ ಒದಗಿಸುತ್ತೇವೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
