AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lokayukta Raid: ಲಂಚಕೋರ ಆಹಾರ ನಿರೀಕ್ಷಕನೊಬ್ಬ ಪರಾರಿಯಾಗಿ ಸಿಕ್ಕಿಬೀಳುವ ಮೊದಲು ಲೋಕಾಯುಕ್ತ ಅಧಿಕಾರಿಗಳನ್ನು ಕೊಲ್ಲುವ ಯತ್ನ ಮಾಡಿದ!

Lokayukta Raid: ಲಂಚಕೋರ ಆಹಾರ ನಿರೀಕ್ಷಕನೊಬ್ಬ ಪರಾರಿಯಾಗಿ ಸಿಕ್ಕಿಬೀಳುವ ಮೊದಲು ಲೋಕಾಯುಕ್ತ ಅಧಿಕಾರಿಗಳನ್ನು ಕೊಲ್ಲುವ ಯತ್ನ ಮಾಡಿದ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2023 | 12:13 PM

Share

ಲೋಕಾಯುಕ್ತ ಅಧಿಕಾರಿಗಳ ವಾಹನದ ಮೇಲೆ ತನ್ನ ಕಾರು ಹತ್ತಿಸಿ ಅವರನ್ನು ಕೊಲ್ಲುವ ಪ್ರಯತ್ನ ಕೂಡ ಮಹಾಂತೇಗೌಡ ಮಾಡಿದ್ದಾನೆ

ಬೆಂಗಳೂರು: ಆಹಾರ ನಿರೀಕ್ಷಕರು ಕುಬೇರರು ಅನ್ನೋದು ಸುಳ್ಳಲ್ಲ, ಯಾಕೆ ಅಂತ ಎಲ್ಲರಿಗೂ ಗೊತ್ತಿರುವ ಸಂಗತಿ. ನಗರದ ಕೆಜಿ ಸರ್ಕಲ್ ನಲ್ಲಿ ಆಹಾರ ನಿರೀಕ್ಷಕನಾಗಿ (food inspector) ಕೆಲಸ ಮಾಡುವ ಮಹಾಂತೇಗೌಡ (Mahanth Gowda) ಶುಕ್ರವಾರದಂದು ಟ್ರೇಡ್ ಲೈಸೆನ್ಸ್ ಮಾಡಿಕೊಡಲು ರಂಗಧಾಮಯ್ಯ ಹೆಸರಿನ ವ್ಯಕ್ತಿಯಿಂದ ರೂ. 43,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ (Lokayukta Sleuths) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಒಂದು ಸಿನಿಮೀಯ ಘಟನೆ ಬಳಿಕ ಮಹಾಂತೇಗೌಡನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಸಲಿಗೆ ಆಗಿದ್ದೇನೆಂದರೆ, ಲೋಕಾಯುಕ್ತ ಅಧಿಕಾರಿಗಳನ್ನು ಕಂಡಾಕ್ಷಣ ಮಹಾಂತೇಗೌಡ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ. ಅವನನ್ನು 15 ಕಿಮೀವರೆಗೆ ಹಿಂದಟ್ಟಿದ ಲೋಕಾಯುಕ್ತ ಪೊಲೀಸ್ ನೆಲಮಂಗಲದ ಸೊಂಡೆಕೊಪ್ಪ ಎಂಬಲ್ಲಿ ಅಡ್ಡಹಾಕಿ ಹಿಡಿದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ವಾಹನದ ಮೇಲೆ ತನ್ನ ಕಾರು ಹತ್ತಿಸಿ ಅವರನ್ನು ಕೊಲ್ಲುವ ಪ್ರಯತ್ನ ಕೂಡ ಮಹಾಂತೇಗೌಡ ಮಾಡಿದ್ದಾನೆ. ಹಾಗಾಗಿ ಅವನ ವಿರುದ್ಧ ಕೊಲೆಯತ್ನದ ಕೇಸ್ ಕೂಡ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಹಾಂತಗೌಡನಿಗೆ ಉಳಿಗಾಲವಿದ್ದಂತಿಲ್ಲ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ