ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿಗೆ ಕೌಂಟ್ ಡೌನ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡಗಳಿಗೆ ಕಿಟ್ ವಿತರಿಸಿದ ಅರವಿಂದ ಲಿಂಬಾವಳಿ

|

Updated on: Nov 20, 2023 | 12:42 PM

ಬೆಂಗಳೂರು, ನವೆಂಬರ್ 20: ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿ ಕ್ರಿಕೆಟ್​​​ಗಾಗಿ ( Dr. Raj Cricket 6th edition) ಕೌಂಟ್ ಡೌನ್ ಹಿನ್ನೆಲೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳಿಗೆ ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಅವರು ಕ್ರಿಕೆಟ್ ಕಿಟ್ ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ವಿತರಿಸಿದರು.

ಬೆಂಗಳೂರು, ನವೆಂಬರ್ 20: ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿ ಕ್ರಿಕೆಟ್​​​ಗಾಗಿ ( Dr. Raj Cricket 6th edition) ಕೌಂಟ್ ಡೌನ್ ಹಿನ್ನೆಲೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳಿಗೆ ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ (Former Minister Aravinda Limbavali) ಅವರು ಕ್ರಿಕೆಟ್ ಕಿಟ್ ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ವಿತರಿಸಿದರು. ಈ ಸಂದರ್ಭದಲ್ಲಿ ELV ಲಯನ್ಸ್, GLR ಮಯೂರ ರಾಯಲ್ಸ್, ರುಚಿರ ರೇಂಜರ್ಸ್ ತಂಡಗಳ ಸೆಲೆಬ್ರಿಟಿ ನಾಯಕರು, ಆಟಗಾರರಿಗೆ ಕ್ರಿಕೆಟ್ ಕಿಟ್ ಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ GLR ತಂಡದ ಮಾಲೀಕರಾದ ಎಲ್. ರಾಜೇಶ್, ELV ಲಯನ್ಸ್ ಮಾಲೀಕರಾದ ಭಾಸ್ಕರ್, ನಟರಾದ ಡಾರ್ಲಿಂಗ್ ಕೃಷ್ಣ, ಧರ್ಮ ಕೀರ್ತಿ ರಾಜ್, ಅರುಣ್ ಬಚ್ಚನ್, ನಿರ್ದೇಶಕ ಪವನ್ ಒಡೆಯರ್ ಮತ್ತಿತರರು ಭಾಗವಹಿಸಿದ್ದರು. ವಿಶೇಷವಾಗಿ ಈ ಬಾರಿಯ ಡಾ ರಾಜ್ ಕಪ್ ನಾಲ್ಕು ದೇಶಗಳಲ್ಲಿ(ಸಿಂಗಾಪುರ್, ಮಸ್ಕಟ್, ಶ್ರೀಲಂಕಾ, ಮಲೇಶಿಯ) ನಡೆಯಲಿದ್ದು ಸ್ಯಾಂಡ್ ವುಡ್ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹರಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ