Loading video

ದೇವೇಗೌಡರ ಬಗ್ಗೆ ಕಾಮೆಂಟ್ ಮಾಡುವ ಯಾವುದೇ ನೈತಿಕತೆ ಯೋಗೇಶ್ವರ್​​ಗಿಲ್ಲ: ಸುರೇಶ್ ಬಾಬು

|

Updated on: Nov 27, 2024 | 12:40 PM

ಯೋಗೇಶ್ವರ್ ಜೆಡಿಎಸ್​ ಶಾಸಕರನ್ನು ಕಾಂಗ್ರೆಸ್ ಕರೆದೊಯ್ಯುವುದಾಗಿ ನೀಡಿರುವ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ ಸುರೇಶ್ ಬಾಬು, ಒಂದೂವರೆ ವರ್ಷದ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಏರ್ಪಟ್ಟಾಗ ಆಗ ಬಿಜೆಪಿಯಲ್ಲಿದ್ದ ಯೋಗೇಶ್ವರ್ ಕಾಂಗ್ರೆಸ್​ನಿಂದ ಮೂವತ್ತು ಶಾಸಕರನ್ನು ತರುವುದಾಗಿ ಹೇಳಿದ್ದರು, ಹಾಗಾಗಿ ಅವರ ಮಾತಿಗೆ ಬೆಲೆ ನೀಡುವ ಅಗತ್ಯವಿಲ್ಲ ಎಂದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಚುನಾವಣೆಗಳ ಸೋಲಿನಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಯಾವತ್ತೂ ಧೃತಿಗೆಟ್ಟವರಲ್ಲ, ಚನ್ನಪಟ್ಟಣ ಅಸೆಂಬ್ಲಿ ಚುನಾವಣೆಯಲ್ಲಿ ಮೊಮ್ಮಗನ ಸೋಲು ಅವರನ್ನು ಅಧೀರರಾಗಿಸಿಲ್ಲ, ದೆಹಲಿಗೆ ತೆರಳಿ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ, ಸಿಪಿ ಯೋಗೇಶ್ವರ್ ಗೆ ದೇವೇಗೌಡರ ಬಗ್ಗೆ ಕಾಮೆಂಟ್ ಮಾಡಲು ಯಾವ ನೈತಿಕತೆಯೂ ಇಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್ ಆಗುತ್ತೆ ಎಂದ ಸುರೇಶ್ ಬಾಬು