ತಂದೆ ಮತ್ತು ಪಕ್ಷದ ಹಿರಿಯರ ನಡುವಿನ ಮುನಿಸು ಮುಂಬರುವ ದಿನಗಳಲ್ಲಿ ಕೊನೆಯಾಗುತ್ತದೆ: ಹರೀಶ್ ಗೌಡ
ಇತ್ತೀಚಿಗೆ ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ ಅವರು ಜಿಟಿ ದೇವೇಗೌಡರ ಮನೆಗೆ ಭೇಟಿ ನೀಡಿದ್ದು ಮತ್ತು ತೃತೀಯ ರಂಗ ಸ್ಥಾಪಿಸುವ ಬಗ್ಗೆ ಗೌಡರೊಂದಿಗೆ ಚರ್ಚೆ ನಡೆಸಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ದೇವೇಗೌಡರೇನಾದರೂ ಇಬ್ರಾಹಿಂ ಜೊತೆ ಕೈ ಜೋಡಿಸುತ್ತಾರಾ ಅಂತ ಕೇಳಿದ್ದಕ್ಕೆ ಅವರ ನಡುವಿನ ಏನು ಚರ್ಚೆ ನಡೆದಿದೆ ಗೊತ್ತಿಲ್ಲ, ತನ್ನ ತಂದೆ ಯಾವತ್ತೂ ಪಕ್ಷ ಬಿಡುವ ಮಾತಾಡಿಲ್ಲ ಎಂದು ಹರೀಶ್ ಹೇಳಿದರು.
ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡ ಮತ್ತೊಮ್ಮೆ ಪಕ್ಷದ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದಾರೆ. ಆದರೆ ಅವರ ಮಗ ಮತ್ತು ಶಾಸಕ ಹರೀಶ್ ಗೌಡ ಮಾತ್ರ ಅದೇನೂ ವಿಷಯವೇ ಅಲ್ಲ ಎನ್ನುವಂತೆ ಮಾತಾಡುತ್ತಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು ಎಲ್ಲ ಪಕ್ಷಗಳಲ್ಲೂ ನಾಯಕರ ನಡುವೆ ಅಸಮಾಧಾನ ಇರುತ್ತದೆ, ಮುಂಬರುವ ದಿನಗಳಲ್ಲಿ ಅದನ್ನು ಸರಿಪಡಿಸಲಾಗುವುದು ಎಂದು ಹೇಳುತ್ತಾರೆ. ಇದೇ ವಿಷಯವನ್ನು ಅವರು ಎರಡು ಮೂರು ಸಲ ಪುನರಾವರ್ತಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ಡೆಮಾಲಿಷ್ ಮಾಡ್ತಿದ್ದಾರೆ: ಜಿಟಿ ದೇವೇಗೌಡ ವಾಗ್ದಾಳಿ
Latest Videos