ಅಧಿಕಾರದ ಲಾಲಸೆ ಇದ್ದಿದ್ದರೆ ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿರುತ್ತಿದ್ದೆ: ಹೆಚ್ ಡಿ ರೇವಣ್ಣ, ಶಾಸಕ

ಅಧಿಕಾರದ ಲಾಲಸೆ ಇದ್ದಿದ್ದರೆ ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿರುತ್ತಿದ್ದೆ: ಹೆಚ್ ಡಿ ರೇವಣ್ಣ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 27, 2024 | 2:03 PM

ಚನ್ನಪಟ್ಟಣ ಉಪ ಚುನಾವಣೆಯಿಂದ ರೇವಣ್ಣರನ್ನು ದೂರವಿಡಲಾಗಿತ್ತು, ಯಾಕೆ ಅಂತ ಕನ್ನಡಿಗರಿಗೆಲ್ಲ ಗೊತ್ತು. ಅದರೆ ತನ್ನ ಕೊನೇ ಉಸಿರಿರುವವರೆಗೆ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ತನ್ನ ನಾಯಕರು ಎಂದು ರೇವಣ್ಣ ಹೇಳುತ್ತಾರೆ. ಕುಮಾರಸ್ವಾಮಿ ತನ್ನ ರಾಜಕೀಯ ಬದುಕಿನಲ್ಲಿ ತುಂಬಾ ನೋವನ್ನುಂಡಿದ್ದಾರೆ ಎಂದು ಅವರು ಹೇಳುತ್ತಾರೆ.

ಬೆಂಗಳೂರು: ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರಿಗೆ ರಾಜ್ಯದ ಉಪ ಮುಖ್ಯಮಂತ್ರಿಯಾಗುವ ಅವಕಾಶವಿತ್ತೇ? ಅವರ ಮಾತುಗಳನ್ನು ನಂಬುವುದಾದರೆ ಹೌದು. ಯಾರೋ ಒಬ್ಬ ನಾಯಕರು ಅವರಿಗೆ ದೆಹಲಿಯಿಂದ 5 ಜನರನ್ನು ಕರೆತರುತ್ತೇನೆ, ನೀವು ಡಿಸಿಎಂ ಅಗಿ ನಾನು ಸಿಎಂ ಆಗುತ್ತೇನೆ ಅಂತ ಹೇಳಿದ್ದರಂತೆ, ಅದರೆ ತಾನ್ಯಾವತ್ತೂ ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ ಹಾಗಾಗಿ ಆಫರನ್ನು ತಿರಸ್ಕರಿಸಿದೆ ಎಂದು ರೇವಣ್ಣ ಹೇಳುತ್ತಾರೆ. ಯಾರು ನಿಮಗೆ ಆಫರ್ ಮಾಡಿದ್ದು ಅಂತ ಕೇಳಿದರೆ ಅವರಿಂದ ಹಾರಿಕೆಯ ಮಾತು! ಮುಂದೆ ಯಾವತ್ತಾದರೂ ಹೇಳ್ತೀನಿ ಬಿಡಿ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಪ್ರಜ್ವಲ್ ರೇವಣ್ಣನ 4ನೇ ಪ್ರಕರಣದ ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್

Published on: Nov 27, 2024 01:29 PM