‘ಪ್ರೀತಿಗಿಂತ ದೊಡ್ಡ ಅಮಲು ಯಾವುದೂ ಇಲ್ಲ’; ಲವ್ ಬಗ್ಗೆ ‘ಲವ್ ಮಾಕ್ಟೇಲ್ 2’ ವೇದಿಕೆಯಲ್ಲಿ ಕ್ರೇಜಿಸ್ಟಾರ್ ಮಾತು
‘ಲವ್ ಮಾಕ್ಟೇಲ್ 2’ ಚಿತ್ರ ಸಖತ್ ನಿರೀಕ್ಷೆ ಮೂಡಿಸಿದೆ. ಫೆ.11ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಚಿತ್ರತಂಡಕ್ಕೆ ರವಿಚಂದ್ರನ್ ಶುಭ ಹಾರೈಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಲವ್ ಸ್ಟೋರಿ ಸಿನಿಮಾಗಳಿಗೆ ಹೊಸ ಅರ್ಥ ಕೊಟ್ಟವರು ಕ್ರೇಜಿ ಸ್ಟಾರ್ ರವಿಚಂದ್ರನ್. ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ಅವರೇ ಸ್ಫೂರ್ತಿ. ಅನೇಕ ಸಿನಿಮಾಗಳ ಕಾರ್ಯಕ್ರಮಕ್ಕೆ ಅವರು ಅತಿಥಿಯಾಗಿ ಬಂದು ಶುಭ ಹಾರೈಸುತ್ತಾರೆ. ಅದೇ ರೀತಿ ಫೆ.8ರಂದು ನಡೆದ ‘ಲವ್ ಮಾಕ್ಟೇಲ್ 2’ (Love Mocktail 2)ಚಿತ್ರದ ಪ್ರೀ-ರಿಲೀಸ್ ಇವೆಂಟ್ಗೆ ಅವರು ಮುಖ್ಯ ಅತಿಥಿ ಆಗಿದ್ದರು. ಈ ವೇದಿಕೆಯಲ್ಲಿ ಅವರು ಪ್ರೀತಿಯ ಬಗ್ಗೆ ಮಾತನಾಡಿದರು. ‘ಲವ್ ಮಾಕ್ಟೇಲ್ 2’ ಚಿತ್ರ ಸಖತ್ ನಿರೀಕ್ಷೆ ಮೂಡಿಸಿದೆ. ಫೆ.11ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಚಿತ್ರತಂಡಕ್ಕೆ ರವಿಚಂದ್ರನ್ (Ravichandran) ಶುಭ ಹಾರೈಸಿದ್ದಾರೆ. ‘ಕೆಲವರಿಗೆ ಗುಂಡು ಹಾಕಿದರೆ ಮತ್ತು (ಅಮಲು) ಸಿಗುತ್ತೆ. ಪ್ರೀತಿಗಿಂತಲೂ ದೊಡ್ಡ ಮತ್ತು ಯಾವುದೂ ಇಲ್ಲ. ‘ಲವ್ ಮಾಕ್ಟೇಲ್’ ಚಿತ್ರದ ಕಥೆ ನೋವಿನಲ್ಲಿ ಕೊನೆ ಆಗಿತ್ತು. ಆ ನೋವಿಗೆ ಈಗ ‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ ಉತ್ತರ ಬೇಕು. ಮನುಷ್ಯ ಕೇವಲ ನೋವಿನಲ್ಲಿಯೇ ಬದುಕಲು ಸಾಧ್ಯವಿಲ್ಲ’ ಎಂದು ರವಿಚಂದ್ರನ್ ಹೇಳಿದರು. ‘ಲವ್ ಮಾಕ್ಟೇಲ್ 2’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ (Darling Krishna) ನಿರ್ದೇಶನ ಮಾಡಿದ್ದಾರೆ. ಮಿಲನಾ ನಾಗರಾಜ್ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ:
‘ಲವ್ ಮಾಕ್ಟೇಲ್ 3’ ಮಾಡ್ತೀರಾ ಎಂಬ ಪ್ರಶ್ನೆಗೆ ಮಿಲನಾ ನಾಗರಾಜ್ ಏನ್ ಅಂದ್ರು?
ರವಿಚಂದ್ರನ್ ಪುತ್ರ ಕನ್ನಡ ಸರಿಯಾಗಿ ಕಲಿತಿದ್ದು ಹೇಗೆ? ಮನುರಂಜನ್ ನೀಡಿದ ವಿವರಣೆ ಇಲ್ಲಿದೆ..