ಕಾಮಕಾಂಡದ ವಿಡಿಯೋ ವೈರಲ್ ಪ್ರಕರಣ: ಆರೋಪಿ ಮ್ಯಾಥ್ಯೂ ಫಸ್ಟ್ ರಿಯಾಕ್ಷನ್
ಲೈಂಗಿಕ ಶೋಷಣೆ, ಅಶ್ಲೀಲ ವಿಡಿಯೋ ಆರೋಪಗಳ ಬಗ್ಗೆ ಬೆಂಗಳೂರು ಕ್ರಿಕೆಟ್ ಕೋಚ್ ಮ್ಯಾಥ್ಯೂ ವಿರುದ್ಧ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಮಹಿಳೆಗೆ ಮೋಸ ಮಾಡಿಲ್ಲ, ವಿಡಿಯೋ ಬಗ್ಗೆ ಗೊತ್ತಿಲ್ಲ, ಆರೋಪಗಳ ಕಾರಣ ತಿಳಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮ್ಯಾಥ್ಯೂ ಮಾತನಾಡಿರುವ ವಿಡಿಯೋ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 27: ಪ್ರಜ್ವಲ್ ರೇವಣ್ಣ ರೀತಿಯಲ್ಲೇ ಹತ್ತಾರು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು, ಅಶ್ಲೀಲ ವಿಡಿಯೋ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಟ್ಟ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಕ್ರಿಕೆಟ್ ಕೋಚ್ ಮ್ಯಾಥ್ಯೂ ಇದೀಗ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ದೂರುದಾರೆ ಮಹಿಳೆಗೆ ನಾನು ಮೋಸ ಮಾಡಿಲ್ಲ. ಜಮೀನು ವಿಚಾರವಾಗಿ ಊರಿಗೆ ಹೋಗಿದ್ದೆ . ಶಾಲೆಗೆ ಮಗಳನ್ನ ಬಿಡಲು ಬಂದಾಗ ಆಕೆ ಪರಿಚಯ ಆಗಿದ್ದು. ವಿಡಿಯೋ ಬಗ್ಗೆ ನನಗೇನು ಗೊತ್ತಿಲ್ಲ, ಯಾರು ಆರೋಪ ಮಾಡಿದ್ದರೋ ಅವರನ್ನೇ ಕೇಳಬೇಕು. ಆ ಮಹಿಳೆಗೆ ಎಲ್ಲಾ ರೀತಿಯಲ್ಲೂ ಸೌಲಭ್ಯ ಮಾಡಿಕೊಟ್ಟಿದ್ದೆ. ಆಕೆಯನ್ನು ಊರಿಗೆ ಕರೆದುಕೊಂಡು ಹೋಗುವುದಕ್ಕೆ ಆಗಿಲ್ಲ. ಆಕೆ ಯಾವ ಕಾರಣಕ್ಕೆ ಆರೋಪ ಮಾಡಿದ್ದಾಳೆಂದು ಗೊತ್ತಿಲ್ಲ. ಬಿಡುಗಡೆ ಮಾಡಿದ ಫೋಟೋ ಬಗ್ಗೆ ಆಕೆಯನ್ನೇ ಕೇಳಬೇಕು. ಅದು ನನ್ನ ಫೋಟೋ, ವಿಡಿಯೋಗಳಲ್ಲ ಎಂದು ಮ್ಯಾಥ್ಯೂ ಹೇಳಿದ್ದಾರೆ.
ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
