ಭತ್ತದ ಗದ್ದೆಯಲ್ಲಿ ಬೆಚ್ಚಗೆ ಮಲಗಿತ್ತು ಮೊಸಳೆ! ವಿಡಿಯೋ ನೋಡಿ
ಭತ್ತ ಕಟಾವು ಮಾಡುವ ವೇಳೆ ಮೊಸಳೆ ಕಂಡಿದೆ. ಕಟಾವು ಯಂತ್ರದ ಚಾಲಕ ಮೊಸಳೆಯನ್ನು ನೋಡಿ ಗಾಬರಿಗೊಂಡಿದ್ದಾನೆ. ಜನರನ್ನು ಕಂಡು ಮೊಸಳೆ ಕೂಡಾ ಸ್ವಲ್ಪ ಸಮಯ ಗಾಬರಿಯಾಗಿತ್ತು.
ರಾಜ್ಯದಲ್ಲಿ ಸದ್ಯ ರೈತರು ಫುಲ್ ಬ್ಯುಸಿ ಆಗಿದ್ದಾರೆ. ಮಳೆ ಸ್ಪಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ ರೈತರು ಭತ್ತದ ಕಟಾವಿಗೆ ಮುಂದಾಗಿದ್ದಾರೆ. ಮಳೆಯಿಂದ ಪಾರಾದ ಅಷ್ಟೊ ಇಷ್ಟೋ ಭತ್ತವನ್ನಾದರೂ ಕಟಾವು ಮಾಡೋಣ ಅಂತ ರೈತರು ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಈ ವೇಳೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿಯ ಭತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಗಾಬರಿಗೊಂಡಿದ್ದಾರೆ. ಕಾರಣ ಮೊಸಳೆ ಪ್ರತ್ಯಕ್ಷವಾಗಿದೆ. ಮೊಸಳೆ ಭತ್ತದ ಗದ್ದೆಯಲ್ಲಿ ಬೆಚ್ಚಗೆ ಅಡಗಿ ಕುಳಿತಿತ್ತು. ಭತ್ತ ಕಟಾವು ಮಾಡುವ ವೇಳೆ ಮೊಸಳೆ ಕಂಡಿದೆ. ಕಟಾವು ಯಂತ್ರದ ಚಾಲಕ ಮೊಸಳೆಯನ್ನು ನೋಡಿ ಗಾಬರಿಗೊಂಡಿದ್ದಾನೆ. ಜನರನ್ನು ಕಂಡು ಮೊಸಳೆ ಕೂಡಾ ಸ್ವಲ್ಪ ಸಮಯ ಗಾಬರಿಯಾಗಿತ್ತು. ನಂತರ ಮೊಸಳೆ ಕಂಡು ಬೆಚ್ಚಿಬಿದ್ದ ರೈತರು ಮೊಸಳೆಯನ್ನು ನದಿಯತ್ತ ಓಡಿಸಿದರು.
ಇದನ್ನೂ ಓದಿ
ಪಾದಯಾತ್ರೆ ಮೂಲಕ ಅಪ್ಪು ಸಮಾಧಿ ನೋಡುವ ಹಂಬಲ: ದಾವಣಗೆರೆ ತಲುಪಿದ ದಾಕ್ಷಾಯಣಿ ಪಾಟೀಲ್
Published on: Dec 05, 2021 02:40 PM