ತುಮಕೂರು: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಖಂಡಿಸಿ ಪಾದಯಾತ್ರೆ ನಡೆಸಲು ನೌಕರರು ಮುಂದಾಗಿದ್ದು ಈಗಾಗಲೇ ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಹೊರಟಿದೆ. ನೌಕರರ ವಜಾ ಆದೇಶ ರದ್ದುಗೊಳಿಸಿ ಪುನರ್ ನೇಮಕಕ್ಕೆ ಒತ್ತಾಯಿಸಿ ನವೆಂಬರ್ 29ರಿಂದ ಶುರುವಾದ ಪಾದಯಾತ್ರೆ ಬಳ್ಳಾರಿಯಿಂದ ಬೆಂಗಳೂರಿನ ಸಿಎಂ ನಿವಾಸದವರೆಗೆ ಬರಲಿದೆ. ಸದ್ಯ ಈಗ ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಹೊರಟಿದೆ.
ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ಭರ್ಜರಿ ಸೌಂಡ್ ಮಾಡಿತ್ತು, ವೇತನ ವೆಚ್ಚಳ ಹಾಗೂ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಸ್‌ಗಳನ್ನು ನಿಲ್ಲಿಸಿ ಮುಷ್ಕರ ನಡೆಸಿದ್ದರು, ಮುಷ್ಕರದಲ್ಲಿ ಬಹುತೇಕ ಮಂದಿ ಭಾಗಿಯಾಗಿದ್ದರು. ಹೀಗೆ ಭಾಗಿಯಾದ್ದವರಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ನೌಕರರನ್ನ ಸಾರಿಗೆ ಇಲಾಖೆ ವಜಾ ಮಾಡಿದ್ದರು. ಸದ್ಯ ವಜಾ ಹಿಂಪಡೆದು ಪುನರ್ ನೇಮಕ ಮಾಡುವಂತೆ ನೌಕರರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಕೆಲ ತಿಂಗಳುಗಳ ಹಿಂದೆ ರಾಜ್ಯಾದ್ಯಂತ ಸಾರಿಗೆ ಇಲಾಖೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗಳನ್ನ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಕರ್ತವ್ಯಕ್ಕೆ ಹಾಜರ್ ಆಗದೇ ಮುಷ್ಕರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.ಹೀಗೆ ಭಾಗಿಯಾಗಿದ್ದವರಲ್ಲಿ ಸಾರಿಗೆ ಇಲಾಖೆ, ಸುಮಾರು ಎರಡೂವರೆ ಸಾವಿರ ನೌಕರನ್ನ ವಜಾ ಮಾಡಿತ್ತು.ಇದರಿಂದ ನೌಕರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸದ್ಯ ಇದನ್ನ ಪುನರ್ ನೇಮಕ ಮಾಡುವಂತೆ ಸ್ವಾನಿಮಾನಿ ಸಾರಿಗೆ ನೌಕರರ ಬ್ಯಾನರ್ ಅಡಿಯಲ್ಲಿ ಪಾದಯಾತ್ರೆ ಮಾಡಲಾಗುತ್ತಿದೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೌಕರರ ವಜಾ ಖಂಡಿಸಿ ಮುಂದುವರೆದ ಪಾದಯಾತ್ರೆ
ತುಮಕೂರಿನಿಂದ ಸಿಎಂ ನಿವಾಸದತ್ತ ಹೊರಟ ನೌಕರರು ನವೆಂಬರ್ 29 ರಂದು ಬಳ್ಳಾರಿಯಿಂದ ಬೆಂಗಳೂರು ವರೆಗೂ ಪಾದಯಾತ್ರೆ ನಡೆಯಲಿದ್ದು, ಸಿಎಂ ಬೊಮ್ಮಾಯಿಗೆ ನಿವಾಸಕ್ಕೆ ಪಾದಯಾತ್ರೆ ನಡೆಯುತ್ತಿದೆ. ಸದ್ಯ ತಡರಾತ್ರಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ ನೌಕರರ ಪಾದಯಾತ್ರೆ, ಮಠದಲ್ಲಿ ವಾಸ್ತವ್ಯ ಇದ್ದು ಇಂದು ಬೆಳಿಗ್ಗೆ ಬೆಂಗಳೂರಿನತ್ತ ತೆರಳುತ್ತಿದ್ದಾರೆ. ಪ್ರತಿದಿನ 20-30 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿದ್ದು,ವಜಾ ಹಾಗೂ ಅಮಾನತು ಆಗಿರುವ ನೌಕರನ್ನ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.ಅಲ್ಲದೇ ಕಳೆದ ಎಂಟು ತಿಂಗಳಿನಿಂದ ಬರೀ ಆಶ್ವಾಸನೆ ನೀಡುತ್ತಿದ್ದು, ಬರೀ ಆದೇಶವಾಗಿಯೇ ಉಳಿದಿದೆ. ಇದರಿಂದ ಮಕ್ಕಳಿಗೆ ವಿಧ್ಯಾಭ್ಯಾಸ ತೊಂದರೆ ಸೇರಿದಂತೆ ಜೀವನ ನಡೆಸಲು ಕಷ್ಟವಾಗಿದೆ ಅಂತಾ ಅಳಲು ತೋಡಿಕೊಂಡಿದ್ದಾರೆ.
ಇನ್ನೂ ಸರ್ಕಾರ ಕೂಡಲೇ ಇದನ್ನ ಹಿಂಪಡೆದು ಪುನರ್ ನೇಮಕ ಮಾಡಬೇಕು,ಈ ಹಿಂದೆ 6-4-21 ರಲ್ಲಿ ಇದ್ದಂತಹ ನೌಕರರ ಸ್ಥಿತಿಯನ್ನ ಸರ್ಕಾರ ಕಾಪಾಡಬೇಕು ಅಂತಾ ಮನವಿ ಮಾಡಿದ್ದಾರೆ.ಅಲ್ಲದೆ ಈ ಪಾದಯಾತ್ರೆ ಯಾವುದೇ ಸರ್ಕಾರ ಅಧಿಕಾರಿಗಳ ನಿಗಮಗಳ ವಿರುದ್ಧ ಪಾದಯಾತ್ರೆ ಮಾಡ್ತಿಲ್ಲ. ನಮ್ಮ ಉದ್ದೇಶ ಈಡೇರಿಕೆಗೆ ಪಾದಯಾತ್ರೆ ಮಾಡಲಾಗುತ್ತಿದೆ ಅಂತಾ ಹೇಳಿದ್ದಾರೆ. ಮುಷ್ಕರದ ಪೂರ್ವ ಸಮಯದಲ್ಲಿ ಇದ್ದಹಾಗೇ ಮುಂದುವರೆಸಿ ಅಂತಾ ಪಾದಯಾತ್ರಿಗಳು ಮನವಿ ಮಾಡಿದ್ದಾರೆ.
ವರದಿ: ಮಹೇಶ್, ಟಿವಿ9 ತುಮಕೂರು
ಇದನ್ನೂ ಓದಿ: Shivaram: ಶಿವರಾಂ ನೆನೆದು ಭಾವುಕರಾದ ಹಿರಿಯ ನಟಿಯರು; ಭಾರತಿ, ಜಯಮಾಲ, ಸುಮಲತಾ ಹೇಳಿದ್ದೇನು?