Chikmagalur: ಹುಟ್ಟೂರು ದೊಡ್ಡಮಾಗರವಳ್ಳಿ ಸುಗ್ಗಿ ಹಬ್ಬದ ಆಚರಣೆಯಲ್ಲಿ ದೇವರ ಅಡ್ಡೆ ತಲೆಮೇಲೆ ಹೊತ್ತು ಭಕ್ತಿಪರವಶರಾಗಿ ಕುಣಿದ ಸಿಟಿ ರವಿ

|

Updated on: Apr 06, 2023 | 11:09 AM

ದೊಡ್ಡಮಾಗರವಳ್ಳಿಯಲ್ಲಿ 12 ದಿನಗಳ ಕಾಲ ನಡೆಯುವ ಉತ್ಸವದ ಕೊನೆಯ ದಿನ ಸುಗ್ಗಿ ಹಬ್ಬ ಆಚರಿಸಲಾಗುತ್ತದೆ.

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi) ತಮ್ಮ ಹುಟ್ಟೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ದೊಡ್ಡಮಾಗರವಳ್ಳಿಯಲ್ಲಿ (Doddamagaravalli) ನಡೆದ ಸುಗ್ಗಿಹಬ್ಬದ (harvest festival) ಆಚರಣೆಯಲ್ಲಿ ದೇವರ ಅಡ್ಡೆ ತಲೆ ಮೇಲೆ ಹೊತ್ತು ಭಕ್ತಿಪರವಶರಾಗಿ ಕುಣಿದ ವಿಡಿಯೋ ನಮಗೆ ಲಭ್ಯವಾಗಿದೆ. ಈ ಹಿಂದೆಯೂ ರವಿಯವರು ಚಿಕ್ಕಮಗಳೂರು ಜಿಲ್ಲಾ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಯುವ ಕ್ರೀಡಾಪಟುಗಳೊಂದಿಗೆ ಕುಣಿದಿದ್ದರು. ಆದರೆ ಆ ಸಂದರ್ಭವೇ ಬೇರೆ. ದೊಡ್ಡಮಾಗರವಳ್ಳಿಯಲ್ಲಿ 12 ದಿನಗಳ ಕಾಲ ನಡೆಯುವ ಉತ್ಸವದ ಕೊನೆಯ ದಿನ ಸುಗ್ಗಿ ಹಬ್ಬ ಆಚರಿಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ