ಸಿಟಿ ರವಿ ಮಾತಾಡುವಾಗ ಎಚ್ಚರ ತಪ್ಪುತ್ತಾರೆ ಅನಿಸುತ್ತದೆ, ಕೆಲವರು ಅದನ್ನು ಎಂಜಾಯ್ ಮಾಡುತ್ತಾರೆ: ಚಲುವರಾಯಸ್ವಾಮಿ

|

Updated on: Dec 21, 2024 | 7:25 PM

ಗುರುವಾರದಂದು ತಮ್ಮನ್ನು ಬಂಧಿಸಿದ ಬೆಳಗಾವಿ ಪೊಲೀಸರು ನಿರ್ಜನ ಪ್ರದೇಶಗಳಲ್ಲಿ ಎನ್ಕೌಂಟರ್ ಮಾಡಬೇಕೆಂದಿದ್ದರೆಂಬ ಸಂದೇಹವನ್ನು ಸಿಟಿ ರವಿ ವ್ಯಕ್ತಪಡಿಸಿದ್ದಾರೆ ಅಂತ ಹೇಳಿದಾಗ ಗೇಲಿ ಮಾಡುವ ಧಾಟಿಯಲ್ಲಿ ಉತ್ತರಿಸಿದ ಚಲುವರಾಯಸ್ವಾಮಿ, ಅವರು ಹಾಗೆ ಅಂದ್ಕೊಳ್ಳೋದೆ ನಿಜವಾದರೆ ಸಿಬಿಐಯಿಂದ ತನಿಖೆ ಮಾಡಿಸಲು ಎಂದು ಹೇಳುತ್ತಾ ನಕ್ಕರು.

ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದ ಉಸ್ತುವಾರಿಯಲ್ಲಿ ಬ್ಯೂಸಿಯಾಗಿರುವ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಸಿಟಿ ರವಿ ಮಾತಾಡುವಾಗ ಯಾಮಾರುವುದು ಉಂಟು, ಮಾಧ್ಯಮಗಳ ಜೊತೆ ಬಹಳ ಎಚ್ಚರಿಕೆಯಿಂದ ಮಾತಾಡಬೇಕಾಗುತ್ತದೆ, ಯಾಕೆಂದರೆ ಆಡುವ ಮಾತಿಗಳು ಕೆಮೆರಾ ಮತ್ತು ಮೈಕ್ ಗಳಲ್ಲಿ ಸೆರೆಯಾಗಿಬಿಡುತ್ತವೆ ಎಂದು ಹೇಳಿದರು. ಆದರೆ ರವಿ ಎಚ್ಚರವಹಿಸುವುದಿಲ್ಲ ಎಂದು ತನ್ನ ಅಭಿಪ್ರಾಯವೆಂದ ಸಚಿವ, ಕೆಲವರಿಗೆ ಹಾಗೆ ಮಾತಾಡುವುದು ಖುಷಿ ನೀಡುತ್ತದೆ ಎಂದು ಹೇಳಿ ತನ್ನ ಮತ್ತು ಮಾಜಿ ಸಂಸದ ಪುಟ್ಟರಾಜು ನಡುವೆ ನಡೆಯುವ ಫ್ರೆಂಡ್ಲಿ ಸಂಭಾಷಣೆಯನ್ನು ಉಲ್ಲೇಖಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಗನ ಸೋಲನ್ನು ಕುಮಾರಸ್ವಾಮಿ ಸಮಾವೇಶದ ನಡೆಸುವ ಮೂಲಕ ಸೆಲಿಬ್ರೇಟ್ ಮಾಡುತ್ತಾರೆಯೇ? ಚಲುವರಾಯಸ್ವಾಮಿ