ಕಷ್ಟದಲ್ಲಿರುವ ಜನರಿಗೆ ಸರ್ಕಾರ ಬರೆ ಹಾಕಿದೆ, ಜನವಿರೋಧಿ ಸರ್ಕಾರ ಎನ್ನಲು ಮತ್ತಾವ್ಯ ಸರ್ಟಿಫಿಕೇಟ್​ ಬೇಕಿಲ್ಲ -ಸಿ.ಟಿ.ರವಿ

| Updated By: ಆಯೇಷಾ ಬಾನು

Updated on: Jun 16, 2024 | 11:59 AM

ಇದು ಜನವಿರೋಧಿ ಸರ್ಕಾರ, ಸತ್ತು ಹೋಗಿರುವ ಸರ್ಕಾರ. ಜನರೇ ಈ ಸರ್ಕಾರವನ್ನು ದಫನ್ ಮಾಡೋ ದಿನ ಬರುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಎಂಎಲ್​ಸಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ನಾಚಿಕೆ, ಮಾನ, ಮರ್ಯಾದಿ ಅನ್ನೋದಾದ್ರೆ ಯಾವುದನ್ನ ಇಟ್ಕೊಂಡು ಇದನ್ನ ಮಾಡಿದ್ದೀರಾ ಎಂದು ಕಿಡಿಕಾರಿದರು.

ಚಿಕ್ಕಮಗಳೂರು, ಜೂನ್.16: ಪೆಟ್ರೋಲ್-ಡೀಸೆಲ್​​​​ ದರ (Petrol Diesel Price increase) ಏರಿಕೆ ಖಂಡಿಸಿ ಬಿಜೆಪಿ (BJP) ಪ್ರತಿಭಟನೆ ನಡೆಸುತ್ತಿದೆ. ರಾಜ್ಯ ಸರ್ಕಾರ ಬೆಲೆ ಏರಿಕೆ‌ಯನ್ನೇ ನೀತಿ ಮಾಡಿಕೊಂಡಿದೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ಎಂಎಲ್​ಸಿ ಸಿ.ಟಿ.ರವಿ (C.T.Ravi) ಹೇಳಿಕೆ ನೀಡಿದ್ದಾರೆ. ತೈಲ ಬೆಲೆ ಏರಿಕೆಯಾದ್ರೆ ಬೆಲೆ ಏರಿಕೆಗೆ ಲೈಸೆನ್ಸ್​​​​ ಕೊಟ್ಟಂತೆ. ಕಷ್ಟದಲ್ಲಿರುವ ಜನರಿಗೆ ಸರ್ಕಾರ ದರ ಏರಿಕೆ ಬರೆ ಹಾಕಿದೆ. ಜನವಿರೋಧಿ ಸರ್ಕಾರ ಎನ್ನಲು ಮತ್ತಾವ್ಯ ಸರ್ಟಿಫಿಕೇಟ್​ ಬೇಕಿಲ್ಲ. ಹಿಂದೆ ಮೋದಿ ಪೆಟ್ರೋಲ್ ದರ ಏರಿಸಿದ್ದಾರೆಂದು ಸಿಎಂ ಬೈಕ್ ಹೊತ್ತೊಯ್ಯುವ ಅಣುಕು ಪ್ರದರ್ಶನ ಮಾಡಿದ್ರು. ಈಗ ಯಾರನ್ನು ಹೊತ್ಕೊಂಡು ಹೋಗಬೇಕು. ನಿಮ್ಮ ಸರ್ಕಾರವನ್ನೇ ಹೊತ್ಕೊಂಡು ಹೋಗಬೇಕು. ಇದು ಜನವಿರೋಧಿ ಸರ್ಕಾರ, ಸತ್ತು ಹೋಗಿರುವ ಸರ್ಕಾರ. ಜನರೇ ಈ ಸರ್ಕಾರವನ್ನು ದಫನ್ ಮಾಡೋ ದಿನ ಬರುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಎಂಎಲ್​ಸಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಚುನಾವಣೆ ಸೋಲಿನ ಬಳಿಕ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ರಾಜಕೀಯ ಪಕ್ಷ, ನಾಯಕರ ಮೇಲೆ ಸೇಡು ಆಯ್ತು, ಈಗ ಜನಸಾಮಾನ್ಯರ ಮೇಲೆ. ಕೂಡಲೇ ಬೆಲೆ ಏರಿಕೆ ಅದೇಶವನ್ನ ಹಿಂಪಡೆಯಬೇಕು. ನೀವು ಮಾಡಿರೋದು ಬೆಲೆ ಏರಿಕೆ, ಲೂಟಿ ಎರಡೇ. ಬೇರೇನು ಮಾಡಿದ್ದೀರಾ? ಓಲೈಕೆ ರಾಜಕಾರಣಕ್ಕೆ ಗ್ಯಾರಂಟಿ ಆಸೆ ತೋರಿಸಿದ್ರಿ, ಅದು ಧಕ್ಕದಿದ್ದಾಗ ಬೆಲೆ ಏರಿಕೆ ಮಾಡಿದ್ದೀರಾ. ನಾಚಿಕೆ, ಮಾನ, ಮರ್ಯಾದಿ ಅನ್ನೋದಾದ್ರೆ ಯಾವುದನ್ನ ಇಟ್ಕೊಂಡು ಇದನ್ನ ಮಾಡಿದ್ದೀರಾ ಎಂದು ಕಿಡಿಕಾರಿದರು.

ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us on