ಚಿಕ್ಕಮಗಳೂರು: ಲಿಂಗಾಯತ ಸಮಾವೇಶದಲ್ಲಿ ಸಿಟಿ ರವಿ ಪರ ಪತ್ನಿ ಪಲ್ಲವಿ ರವಿ ಮತಯಾಚನೆ
ಚಿಕ್ಕಮಗಳೂರು: ನಗರದ ಬೈಪಾಸ್ ರಸ್ತೆಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಸಿ.ಟಿ ರವಿ ಪರವಾಗಿ ಪತ್ನಿ ಪಲ್ಲವಿ ರವಿಯವರು ಮತಯಾಚಿಸಿದರು.
ಚಿಕ್ಕಮಗಳೂರು: ನಗರದ ಬೈಪಾಸ್ ರಸ್ತೆಯಲ್ಲಿ ನಡೆದ ಲಿಂಗಾಯತ (Lingayat) ಸಮಾವೇಶದಲ್ಲಿ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ, ಶಾಸಕ ಸಿ.ಟಿ ರವಿ (CT Ravi) ಪರವಾಗಿ ಪತ್ನಿ ಪಲ್ಲವಿ ರವಿಯವರು ಮತಯಾಚಿಸಿದರು. ಅನಾರೋಗ್ಯ ಕಾರಣದಿಂದ ಶಾಸಕ ಸಿ.ಟಿ ರವಿಯವರು ಆಸ್ಪತ್ರಗೆ ದಾಖಲಾದ ಹಿನ್ನೆಲೆ ಸಮಾವೇಶಕ್ಕೆ ಗೈರಾಗಿದ್ದರು. ಉತ್ತಮವಾಗಿ ಕೆಲಸ ಮಾಡಿರುವ ನಿಮ್ಮ ಮಗನಿಗೆ ಮತ ಹಾಕಿ. ನನ್ನ ಗಂಡನ ಬಗ್ಗೆ ಲಿಂಗಾಯತ ವಿರೋಧಿ ಎಂದು ಅಪಪ್ರಚಾರ ಮಾಡುತ್ತಾರೆ. ಲಿಂಗಾಯತ ಸಮುದಾಯ ಸಿ.ಟಿ ರವಿ ಕೈ ಹಿಡಿಯಬೇಕು ಎಂದು ಪಲ್ಲವಿ ರವಿ ಕಣ್ಣೀರು ಹಾಕಿದರು. ಅಲ್ಲದೇ ನಾನು ಸಮಾರಂಭಗಳಿಗೆ ಹೋದಾಗ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನಾನು ಮನೆಗೆ ಬಂದು ಸಿಟಿ ರವಿ ಅವರಿಗೆ ಹೇಳಿದರೇ ನೀನೆ ಜಾಸ್ತಿ ತಲೆ ತಿಂತೀಯಾ ಅಂತ ನಮ್ಮೆಜಮಾನ್ರು ಅಂತಿದ್ದರು ಎಂದು ಪತ್ನಿ ಪಲ್ಲವಿ ರವಿ ಹೇಳಿದರು.
Published on: Apr 16, 2023 02:48 PM
Latest Videos