ದಾವಣಗೆರೆ: ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ

Edited By:

Updated on: Apr 09, 2025 | 11:16 AM

ಐತಿಹಾಸಿಕ ಕೊಕ್ಕನೂರ ಆಂಜನೇಯ ಉತ್ಸವ ದಾವಣಗೆರೆ ಜಿಲ್ಲೆಯ ಪ್ರಖ್ಯಾತ ಉತ್ಸವಗಳಲ್ಲೊಂದು. ಇಲ್ಲಿನ ಆಂಜನೇಯ ಸ್ವಾಮಿ ನೋಟಿನ ಪಲ್ಲಕ್ಕಿ ಉತ್ಸವವೂ ಅಷ್ಟೇ ಮಹತ್ವದ್ದು. ಈ ನೋಟಿನ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು. ಭಕ್ತರು ನೋಟು ಸಮರ್ಪಣೆ ಮಾಡಿ ಹರಕೆ ತೀರಿಸಿಕೊಂಡರು. ಉತ್ಸವದ ವಿಡಿಯೋ ಇಲ್ಲಿದೆ ನೋಡಿ.

ದಾವಣಗೆರೆ, ಏಪ್ರಿಲ್ 9: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರ ಆಂಜನೇಯ ಸ್ವಾಮಿ ಪುಣ್ಯಕ್ಷೇತ್ರದ ಐತಿಹಾಸಿಕ ಕೊಕ್ಕನೂರ ಆಂಜನೇಯ ಉತ್ಸವ ವೈಭವದಿಂದ ನೆರೆವೇರಿತು. ಗರಿ ಗರಿ ನೋಟಿನ‌ ಪಲ್ಲಕ್ಕಿ ಉತ್ಸವ ಗಮನ ಸೆಳೆಯಿತು. ಸಾವಿರಾರು ಭಕ್ತರು ಪಲ್ಲಕ್ಕಿಗೆ ‌ನೋಟು ನೀಡಿ ಹರಕೆ ಸಮರ್ಪಣೆ ಮಾಡಿದರು. ಆಂಜನೇಯಸ್ವಾಮಿ, ಕೊಮಾರನಹಳ್ಳಿ ಬೀರದೇವರು, ದುರ್ಗಾಂಭಾ, ಮಾತಂಗ್ಯೆಮ್ಮ ದೇವಿಯ ಪಲ್ಲಕ್ಕಿಗಳು ಗ್ರಾಮದ ಪ್ರತಿಯೊಂದು ಮನೆಗೆ ತೆರಳಿದವು. ಹರಕೆ ಹೊತ್ತ ಭಕ್ತರು ಹತ್ತು, ಇಪ್ಪತ್ತು, ಐವತ್ತು, ನೂರು, ಇನ್ನೂರು ಹಾಗೂ ಐದು ನೂರು ಮುಖ ಬೆಲೆಯ ನೋಟುಗಳ ಹಾರ ಹಾಕಿ ಭಕ್ತ ಸಮರ್ಪಣೆ ಮಾಡಿದರು. ಆಂಜನೇಯ ಸ್ವಾಮಿ ಪಲ್ಲಕ್ಕಿಗೆ 14.80 ಲಕ್ಷ ರೂ. ಸೇರಿ ಒಟ್ಟು 15.69 ಲಕ್ಷ ರೂ. ಹಣ ಸಂಗ್ರಹ‌ವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ