ವೇದಿಕೆ ಮೇಲೆ ಸಚಿವ ಸಂತೋಷ್ ಲಾಡ್ ಬಳಿಯೇ ನಿಮ್ಮ ಹೆಸರೇನೆಂದು ಕೇಳಿದ ಯುವಕ
ಮುಧೋಳದ ಕುಮಕಾಲೆ ಖಾಸಗಿ ಪಿಯುಸಿ ಕಾಲೇಜಿಂದ ಸೈಕ್ಲಿಂಗ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸೈಕ್ಲಿಂಗ್ ಪಟು ಭಾಷಣ ಮಾಡುವಾಗ ಅವರ ಪಕ್ಕದಲ್ಲೇ ಸಚಿವ ಸಂತೋಷ ಲಾಡ್ ನಿಂತಿದ್ದರು. ಭಾಷಣ ಮಾಡುವಾಗ ಆ ಯುವಕ ಸಂತೋಷ್ ಲಾಡ್ ಅವರ ಬಳಿ ತಮ್ಮ ಹೆಸರು ಏನೆಂದು ಕೇಳಿದ್ದಾರೆ. ನಾನು ನಿಮ್ಮನ್ನ ಟಿವಿ, ಪೇಪರಲ್ಲಿ ನೋಡಿದ್ದೇನೆ, ಆದರೆ ನಿಮ್ಮ ಹೆಸರು ಮರೆತುಹೋಯಿತು ಎಂದ ಸೈಕ್ಲಿಂಗ್ ಪಟುಗೆ ನಗುತ್ತಲೇ ನನ್ನ ಹೆಸರು ಸಂತೋಷ್ ಲಾಡ್ ಎಂದು ಹೇಳಿದ ಸಚಿವರ ಮಾತಿಗೆ ಅಲ್ಲಿ ಸೇರಿದ್ದವರೆಲ್ಲ ನಗಲಾರಂಭಿಸಿದರು. ಆದರೂ ಸಚಿವರು ಕೋಪಗೊಳ್ಳದೆ ನಗುತ್ತಲೇ ಆ ಯುವಕನ ಹೆಗಲ ಮೇಲೆ ಕೈಹಾಕಿ ಆತ ಮಾಡಿದ ಭಾಷಣ ಕೇಳಿದ್ದಾರೆ.
ಮುಧೋಳ, ನವೆಂಬರ್ 22: ಬಾಗಲಕೋಟೆಯ ಮುಧೋಳ ನಗರದಲ್ಲಿ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟವನ್ನು ಸಚಿವ ಸಂತೋಷ್ ಲಾಡ್ (Santosh Lad) ಉದ್ಘಾಟನೆ ಮಾಡಿದರು. ಮುಧೋಳದ ಕುಮಕಾಲೆ ಖಾಸಗಿ ಪಿಯುಸಿ ಕಾಲೇಜಿಂದ ಸೈಕ್ಲಿಂಗ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸೈಕ್ಲಿಂಗ್ ಪಟು ಭಾಷಣ ಮಾಡುವಾಗ ಅವರ ಪಕ್ಕದಲ್ಲೇ ಸಚಿವ ಸಂತೋಷ ಲಾಡ್ ನಿಂತಿದ್ದರು. ಭಾಷಣ ಮಾಡುವಾಗ ಆ ಯುವಕ ಸಂತೋಷ್ ಲಾಡ್ ಅವರ ಬಳಿ ತಮ್ಮ ಹೆಸರು ಏನೆಂದು ಕೇಳಿದ್ದಾರೆ. ನಾನು ನಿಮ್ಮನ್ನ ಟಿವಿ, ಪೇಪರಲ್ಲಿ ನೋಡಿದ್ದೇನೆ, ಆದರೆ ನಿಮ್ಮ ಹೆಸರು ಮರೆತುಹೋಯಿತು ಎಂದ ಸೈಕ್ಲಿಂಗ್ ಪಟುಗೆ ನಗುತ್ತಲೇ ನನ್ನ ಹೆಸರು ಸಂತೋಷ್ ಲಾಡ್ ಎಂದು ಹೇಳಿದ ಸಚಿವರ ಮಾತಿಗೆ ಅಲ್ಲಿ ಸೇರಿದ್ದವರೆಲ್ಲ ನಗಲಾರಂಭಿಸಿದರು. ಆದರೂ ಸಚಿವರು ಕೋಪಗೊಳ್ಳದೆ ನಗುತ್ತಲೇ ಆ ಯುವಕನ ಹೆಗಲ ಮೇಲೆ ಕೈಹಾಕಿ ಆತ ಮಾಡಿದ ಭಾಷಣ ಕೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
