ದಿತ್ವಾ ಚಂಡಮಾರುತ ಎಫೆಕ್ಟ್:​​ ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆ, ಮೈನಡುಗಿಸುವ ಚಳಿ

Updated on: Nov 30, 2025 | 8:49 AM

ದಿತ್ವಾ ಚಂಡಮಾರುತದ ಪರಿಣಾಮ ಬೆಂಗಳೂರಿನ ಮೇಳು ಬೀರಿದೆ. ನಗರದಲ್ಲಿ ಬೆಳ್ಳಂಬೆಳಗ್ಗೆ ಮಳೆ ಸುರಿದಿದ್ದು, ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ತಮಿಳುನಾಡು, ಆಂಧ್ರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ಬೆಂಗಳೂರಿನಲ್ಲೂ ಮಳೆ ಸಹಿತ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು, ನವೆಂಬರ್​ 30: ದಿತ್ವಾ ಚಂಡಮಾರುತದ ಎಫೆಕ್ಟ್​​ ಬೆಂಗಳೂರಿನ ಮೇಲೂ ಬೀರಿದೆ.  ನಗರದಲ್ಲಿ ಕಳೆದ ಒಂದು ವಾರದಿಂದ ಚಳಿ ಹೆಚ್ಚಾಗಿದ್ದು, ಇಂದು ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಸುರಿದಿದೆ. ಬೆಂಗಳೂರಿನ ತಾಪಮಾನವು 19 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಚಳಿ ಮತ್ತು ತುಂತುರು ಮಳೆಗೆ ಜನರು ನಡುಗುವಂತಾಗಿದೆ. ಬೆಂಗಳೂರಲ್ಲಿ ಇನ್ನೂ 1 ವಾರ ತುಂತುರು ಮಳೆ, ಭಾರಿ ಚಳಿ ಸಾಧ್ಯತೆ ಇದೆ.

ವಿಕಾಸ್​​​​ ಟಿವಿ9, ಬೆಂಗಳೂರು

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 30, 2025 08:47 AM